
ಹುಬ್ಬಳ್ಳಿ, ಮೇ 2: ಮೇ 1 ಕಾರ್ಮಿಕರ ದಿನಾಚರಣೆ ನಿಮಿತ್ತ ಕಾರ್ಯ ಮತ್ತು ಪಾಲನೆ ಶಾಖೆ-1, ವಿಶ್ವೇಶ್ವರ ನಗರ, ಹು.ವಿ.ಸ.ಕಂ.ನಿ, ಹುಬ್ಬಳ್ಳಿಯಲ್ಲಿ ಸನ್ 2021-22 ಮತ್ತು 2022-23 ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪವರಮ್ಯಾನ್ ಹಾಗೂ ಮಾಪಕ ಓದುಗರಿಗೆ ಪ್ರಶಂಸನಾ ಪತ್ರದ ಜೊತೆಗೆ ರೂ.5000/- ಗಳ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.
2021-22 ರ ಮಾಪಕ ಓದುವಿಕೆಯಲ್ಲಿ ಅತ್ಯುತ್ತಮ ಪವರಮ್ಯಾನ್ ರಿಯಾಜಅಹಮ್ಮದ ಮಾ ನದಾಫ ರವರಿಗೆ, 2021-22 ರ ಅತ್ಯುತ್ತಮ ಪವರಮ್ಯಾನ್ ಸುಖಾನಂದ ಬಸರಖೋಡ, 2022-23 ರ ಮಾಪಕ ಓದುವಿಕೆಯಲ್ಲಿ ಅತ್ಯುತ್ತಮ ಪವರಮ್ಯಾನ್ ಸುಜಾತಾ ವೆಂಕಟೇಶ, 2022-23 ರ ಅತ್ಯುತ್ತಮ ಪವರಮ್ಯಾನ್ ಮೆಹಬೂಬಸುಬಾನಿ ಇ ಮುಲ್ಲಾನ್ನವರ ಇವರಿಗೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಕ.ವಿ.ಪ್ರ.ನಿ ನೌಕರರ ಸಂಘ 659 ಕೇಂದ್ರ ಸಮಿತಿಯ ಸದಸ್ಯರು ಮತ್ತು ಕಲ್ಯಾಣ ಸಂಸ್ಥೆಯ ಉಪಾಧ್ಯಕ್ಷರಾದ ವಿ.ಎಲ್. ಗುಂಜಿಕರ ಮತ್ತು ಮುಖ್ಯ ಅತಿಥಿಗಳಾಗಿ ಶಹರ ಉಪ-ವಿಭಾಗ-1, ಹುಬ್ಬಳ್ಳಿಯ ಸಹಾಯಕ ಲೆಕ್ಕಾಧಿಕಾರಿಯಾದ ನಾಗರಾಜ ಸವಣೂರ, ಶಾಖಾಧಿಕಾರಿಯಾದ ಶ್ರೀ ಸಿದ್ಧಾರೂಢ ಎಚ್.ಬಿ, ಕ.ವಿ.ಪ್ರ.ನಿ ನೌಕರರ ಸಂಘ 659 ಕೇಂದ್ರ ಸಮಿತಿಯ ಸದಸ್ಯರುಗಳಾದ ಪಿ.ಆರ್. ತಾಪಸ್ ಹಾಗೂ ಮೋಹನರಾಜ ಅಮ್ಮಿನಬಾವಿ ಭಾಗವಹಿಸಿದ್ದರು.
ಅತಿಥಿಗಳಾಗಿ ಸ್ಥಳಿಯ ಸಮಿತಿಯ ಉಪಾಧ್ಯಕ್ಷರಾದ ಪ್ರಕಾಶ ಶಲವಡಿ, ಕಾರ್ಯದರ್ಶಿ ಕ್ರಿಷ್ಠೋಪರ, ಖಜಾಂಚಿ ಡಿ.ಬಿ. ಪಣಿಬಂದ, ಸ್ಥಳಿಯ ಸಮಿತಿಯ ಸದಸ್ಯರಾದ ನೇನಕ್ಕಿ ಪ್ರಾಥಮಿಕ ಸಮಿತಿ-6 ರ ಅಧ್ಯಕ್ಷರಾದ ಮುನವಳ್ಳಿ, ಕಾರ್ಯದರ್ಶಿ ಜಿ.ಎಸ್. ಹಿರೇಮಠ ಮತ್ತು ಪ್ರಾಥಮಿಕ ಸಮಿತಿಯ ಸದಸ್ಯರಾದ ಕೆ.ಎನ್. ಕರ್ನೂಲ್, ಎಮ್.ಎಲ್. ಹಿರೆಕುಂಬಿ, ಎಚ್.ಆಯ್. ಕೊಟಗುಣಸಿ, ಜಾನ್, ಶೆಟ್ಟನಗೌಡರ ಹಾಗೂ ವಿಶ್ವೇಶ್ವರ ನಗರ ಶಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.