ಪವರ್‌ಲಿಫ್ಟಿಂಗ್ ತನ್ವಿರ್ ಅಹ್ಮದ್‌ ಗೆ ಕಂಚಿನ ಪದಕ 

ದಾವಣಗೆರೆ.ಮಾ.12; ಕರ್ನಾಟಕ ಪವರ್ ಲಿಪ್ಟ್ ಅಸೋಸಿಯೇಷನ್ ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಪುರಭವನದಲ್ಲಿ ಹಮ್ಮಿಕೊಳ್ಳಲಾದ ರಾಜ್ಯ ಮಟ್ಟದ ಪವರ್‌ಲಿಪ್ಟ್ ಸ್ಪರ್ಧೆಯ ಜ್ಯೂನಿಯರ್ ವಿಭಾಗದಲ್ಲಿ ದಾವಣಗೆರೆ ಪವರ್ ಲಿಪ್ಟ್ನ ನ್ಯಾಷನಲ್ ಚಾಂಪಿಯನ್ ಖ್ಯಾತ ಕ್ರೀಡಾಪಟು ಹೆಚ್.ಟಿಪ್ಪುಸುಲ್ತಾನ್‌ರವರ ದ್ವಿತೀಯ ಸುಪುತ್ರ ತನ್ವಿರ್ ಅಹ್ಮದ್‌ರವರು ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ.ದಾವಣಗೆರೆಯ ದೇವರಾಜ ಅರಸು ಪದವಿ ಪೂರ್ವ ಕಾಲೇಜಿನಲ್ಲಿ ಬಿ.ಎ. ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ತನ್ವಿರ್ ಅಹ್ಮದ್‌ರವರಿಗೆ ಕಾಲೇಜಿನ ಪ್ರಾಚಾರ್ಯರೂ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಸಿಬ್ಬಂದಿ ವರ್ಗ, ನಗರದ ಗ್ರೂಫ್ ಅಫ್ ಐರನ್ ಗೇಮ್ಸ್ ಹಾಗೂ ದಾವಣಗೆರೆ ಮಹಾನಗರ ಪಾಲಿಕೆಯ ಹಿರಿಯ ಕ್ರೀಡಾಪಟುಗಳು, ಹಾಗೂ ಇವರ ತರಬೇತುದಾರರಾದ ಎನ್.ಹನುಮಂತಪ್ಪ ಅಭಿನಂದನೆ ಸಲ್ಲಿಸಿದ್ದಾರೆ.