ಪವನ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

ಧಾರವಾಡ,ನ.1: ನಾಡದೇವತೆ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಹಾಗೂ ನಾಡಗೀತೆಯನ್ನು ಹಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಪವನ್ ಸಮೂಹ ಶಾಲೆಗಳಲ್ಲಿ ಆಚರಿಸಲಾಯಿತು.
ಕನ್ನಡ ನಾಡು,ನುಡಿ, ಸಂಸ್ಕೃತಿ, ಇತಿಹಾಸ, ವೈಭವ ಮುಂತಾದವುಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ಭಾಷಣಗಳು ಹಾಗೂ ಹಾಡುಗಳ ಮೂಲಕ ಹೇಳಿದರು.
ವೇದಿಕೆಯ ಮೇಲೆ ಶಾಲೆಯ ಉಪಾಧ್ಯಕ್ಷರಾದ ರತ್ನಾ ಪಾಟೀಲ್, ಪ್ರಾಚಾರ್ಯರಾದ ವಿಕ್ರಂ ಮಹಾಶಬ್ದೆ, ಪ್ರವೀಣಾ ಬ್ಯಾಹಟ್ಟಿ. ಶಾಲಾ ಕನ್ನಡ ಸಂಘದ ಅಧ್ಯಕ್ಷರಾದ ಸುಜಾತಾ ಪಿ. ಮೊಖಾಶಿ, ಶಾಲಾ ಸಂಸತ್ತಿನ ಪ್ರಧಾನಮಂತ್ರಿಗಳಾದ ಕುಮಾರಿಯರಾದ ಸಾನಿಕಾ ಪೂಜಾರ್ ಹಾಗೂ ಶ್ರೇಯಾ ಕಬಾಡಗಿ, ರತ್ನ ಪಾಟೀಲ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.