ಪವನ್ ನಾಟೆಕಾರ್ ರವರಿಗೆ ಗೌರವ ಡಾಕ್ಟರೇಟ್

ಬೀದರ:ಫೆ.20:ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಬೀದರನ ಜಾನಪದ ನೃತ್ಯ ಅತಿಥಿ ಉಪನ್ಯಾಸಕರಾದ ಪವನ ವಿಠಲರಾವ ನಾಟೆಕಾರ್ ರವರಿಗೆ ಟೊಲೊಸಾ ವಿಶ್ವವಿದ್ಯಾಲಯ ಮೆಕ್ಸಿಕೊದಿಂದ ಜನಪದ ಕಲೆ ಬಗ್ಗೆ ಗೌರವ ಡಾಕ್ಟರೇಟ್ ಪದವಿ ನೀಡಿದ್ದು, ಸದರಿಯವರು ಬೀದರನಲ್ಲಿ ನೃತ್ಯಕಲೆಯಲ್ಲಿ ತುಂಬಾ ಹೆಸರುವಾಸಿಯಾದ ಕಲಾವಿದರಾಗಿದ್ದಾರೆ.
ಜೊತೆಗೆ ಬೀದರನ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕಾ ಘಟಕದ ನಿರ್ದೇಶಕರಾಗಿದ್ದು, ವಿವಿಧ ಶಾಲೆಗಳಲ್ಲಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಆ ಕುರಿತು ಗೌರವ ಡಾಕ್ಟರೇಟ್ ಪದವಿ ಸಿಕ್ಕಿದ್ದು ತುಂಬಾ ಅರ್ಥಪೂರ್ಣವಾಗಿದೆ. ಈ ಕುರಿತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿಗಳಾದ ಡಾ. ಜಗನ್ನಾಥ ಹೆಬ್ಬಾಳೆ ಮತ್ತು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮತ್ತು ಬೀದರ ತಾಲೂಕಾ ಘಟಕದ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಶ್ರೀ ಎಸ್.ಬಿ ಕುಚಬಾಳ ಹಾಗೂ ಶ್ರೀ ಶ್ರೀಧರ ಜಾಧವ, ಶ್ರೀ ವಿಷ್ಣುಕಾಂತ ಹುಡಗಿಕರ್, ರಮೇಶ ಅಯಾಸಪೂರ, ಸಚೀನ ಪಾಟೀಲ, ಅರುಣ ಸಾಗರ, ಜೆ.ಡಿ. ಜಗದೀಶ ಮುಂತಾದ ಎಲ್ಲಾ ಹಿತೈಷಿಗಳು ಶ್ರೀ ಪವನ ನಾಟೆಕಾರ್ ರವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.