ಪವನ್ ಕಲ್ಯಾಣ್ ಚಿತ್ರದ ಟ್ರೈಲರ್ ಬಿಡುಗಡೆ

ಹೈದರಾಬಾದ್, ಮಾ. ೩೦- ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ಚಿತ್ರ” ವಕೀಲ್ ಸಾಬ್” ಟ್ರೈಲರ್ ಬಿಡುಗಡೆಯಾಗಿದ್ದು ಅವರ ಅಭಿಮಾನಿಗಳು ಹಬ್ಬದ ರೀತಿ ಸಂಭ್ರಮವನ್ನು ಆಚರಿಸಿದ್ದಾರೆ.

ವಿಶಾಖಪಟ್ಟಣದ ಸಂಗಮ ಶರತ್ ಚಿತ್ರಮಂದಿರದಲ್ಲಿ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಂಭ್ರಮ ಆಚರಿಸಿದ್ದಾರೆ.

ಟ್ರೈಲರ್ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಗಳು ರಾಜ್ಯಾದ್ಯಂತ ವಿವಿಧ ದೇವಾಲಯಗಳಲ್ಲಿ ಪೂಜೆ ಪುನಸ್ಕಾರ ಮಾಡಿ ಸಂಭ್ರಮ ಹೊರಹಾಕಿದ್ದಾರೆ.

ಅಭಿಮಾನಿಗಳು ರೊಚ್ಚಿಗೆದ್ದು ಕುಣಿದು ಕುಪ್ಪಳಿಸಿದ ರಿಂದ ಚಿತ್ರಮಂದಿರದ ಕಿಟಕಿ ಗಾಜು ಪುಡಿ ಪುಡಿ ಯಾಗಿದೆ.

ನಟ ಪವನ್ ಕಲ್ಯಾಣ್ ಅವರು ಸರಿಸುಮಾರು ಎರಡು ವರ್ಷಗಳ ನಂತರ ವಕೀಲ್ ಸಾಬ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳಿದ್ದಾರೆ.

ಈ ಚಿತ್ರ ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್ ಅವರ ಪಿಂಕ ಚಿತ್ರದ ರೀಮೇಕ್ ಆಗಿದೆ