
ತಾಳಿಕೋಟೆ:ಎ.7: ಶ್ರೀ ರಾಮನನ್ನೇ ತನ್ನ ಹೃದಯದಲ್ಲಿಟ್ಟುಕೊಂಡು ಧ್ಯಾನ ಸ್ವರೂಪಿಯಾಗಿ ಶ್ರೀರಾಮಚಂದ್ರನ ಸೇವಕನೆನಿಸಿಕೊಂಡಂತಹ ಪವನಪುತ್ರ ಹನುಮಾನನಿಗೆ ಆದಿ ಕಾಲದಿಂದಲೂ ಮಾರುತಿ, ಡೋಣಿ ರಾಜ, ಆಂಜನೇಯ, ಭಜರಂಗಿ ಎಂಬ ಅನೇಕ ಹೆಸರುಗಳಿಂದ ಕರೆಯಲಾಗುತ್ತಿರುವ ಪವನಪುತ್ರ ಹನುಮಾನನಿಗೆ ಪೂಜ್ಯಭಾವನೆಯಿಂದ ನಡೆದುಕೊಂಡು ಹೋಗುತ್ತಿರುವ ಭಕ್ತ ಸಮೂಹ ತಮ್ಮ ಬೇಕು ಬೇಡಿಕೆಗಳನ್ನು ಇಡೇರಿಸಿಕೊಂಡು ಮುಂದೆಸಾಗಿರುವುದು ಎಲ್ಲ ಭಕ್ತಸಮೂಹಕ್ಕೆ ಗೊತ್ತಿದ್ದ ವಿಷಯ ಇದಾಗಿದೆ ಎಂದು ಹಿರೂರ ಅನ್ನದಾನೇಶ್ವರ ಮಠದ ಪಟ್ಟಾದೀಶರಾದ ಶ್ರೀ ಷ.ಬ್ರ.ಜಯಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.
ಗುರುವಾರರಂದು ಸ್ಥಳೀಯ ಶ್ರೀ ಆಶ್ರಯ ಬಡಾವಣೆಯಲ್ಲಿ ಶ್ರೀ ಮಾರುತಿ ಸೇವಾ ಸಂಘ ಹಾಗೂ ಗಜಾನನ ಮಂಡಳಿ ಹಾಗೂ ಶ್ರೀ ಹನುಮಾನ ಉತ್ಸವ ಸೇವಾ ಸಮಿತಿಯ ವತಿಯಿಂದ ಏರ್ಪಡಿಸಲಾದ ಶ್ರೀ ಮಾರುತೇಶ್ವರ 14ನೇ ವರ್ಷದ ಜಯಂತ್ಯೋತ್ಸವ ಹಾಗೂ ನವರಥೋತ್ಸವ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಆಶ್ರಯ ಬಡಾವಣೆಯಲ್ಲಿ ನಿರ್ಮಾಣಗೊಂಡ ಶ್ರೀ ಮಾರುತೇಶ್ವರ ಮಂದಿರ ಹಾಗೂ ನವರಥೋತ್ಸವ ನಿರ್ಮಾಣದ ವಿಷಯವನ್ನು ಅವಲೋಕಿಸಿದಾಗ ಈ ಬಡಾವಣೆಯ ನಾಗರಿಕರು ಆಶ್ರಯ ಬಡಾವಣೆಯವರಲ್ಲ ಇವರೆಲ್ಲರೂ ಆಕಾಶದೊಳಗಿರುವ ಬಡಾವಣೆಯವರಾಗಿದ್ದಾರೆಂದರು. 14 ವರ್ಷಗಳಲ್ಲಿ ಬಹಳೇ ಶ್ರಮಪಟ್ಟ ಇಲ್ಲೀಯ ಸಂಘಟನೆಗಳಲ್ಲಿ ವಿವಿಧ ಧರ್ಮಿಯರು ಒಳಗೊಂಡಿದ್ದನ್ನು ನೋಡಿದರೆ ಕೋಮು ಸೌಹಾರ್ದತೆಯ ಭಾವನೆ ಮೂಡಿಸುವ ಬಡಾವಣೆ ಇದಾಗಿದೆ ಎಂದರು. ಹನುಮಾನ ದೇವರಿಗೆ ಎಲ್ಲ ಜಾತಿಯವರು ನಡೆದುಕೊಳ್ಳುತ್ತಾರೆ ಆತ ಜಾತಿ ರಹಿತ ದೇವನಾಗಿದ್ದಾನೆಂದು ಹೇಳಿದ ಶ್ರೀಗಳು ಹನುಮಾನನಿಗೆ ಶನಿ ದೇವರು ಕಾಡಲಿಕ್ಕೆ ಬಂದಾಗ ನನ್ನಮೈಯಲ್ಲಿ ಯಾವ ಸ್ಥಾನವೂ ಇಲ್ಲ ತಲೆಯ ಮೇಲೆ ಒಂದೆ ಸ್ಥಾಆನವಿದೆ ಎಂದು ಶನಿದೇವನಿಗೆ ಹೇಳಿದ ಹನುಮಂತನು ತನ್ನ ತಲೆಯ ಮೇಲೆ ಸ್ಥಾನ ನೀಡಿ ಶನಿದೇವರಿಗೆ ಕಾಡುವಂತಹ ಕಾರ್ಯ ಮಾಡಿದ ಹನುಮಾನನ ಇತಿಹಾಸ ವಿವರಿಸಿದ ಶ್ರೀಗಳು ಈ ಕಾರಣದಿಂದಲೇ ಎಲ್ಲ ಭಕ್ತರು ತಮ್ಮ ಬೇಕುಬೇಡಿಕೆಗಳನ್ನು ಇಡೇರಿಸಿಕೊಳ್ಳಲು ಮುಂದಾಗುತ್ತಾರೆಂದರು.
ಇನ್ನೋರ್ವ ಗುಂಡಕನಾಳ ಬೃಹನ ಮಠದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯರು ಶ್ರೀ ಮಾರುತೇಶ್ವರ ನವರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಶ್ರೀಗಳು ಧರ್ಮ, ಅರ್ಥ, ಕಾಮ,ಮೋಕ್ಷ ಇವುಗಳನ್ನು ಅರಿತು ನಡೆಯಯಬೇಕು ಯಾವ ರೀತಿ ತೆರಿನ ನಾಲ್ಕು ಗಾಲಿಗಳು ಸಮನಾಗಿ ಚಲಿಸುವ ಮೂಲಕ ಪಾದಕಟ್ಟೆಯನ್ನು ಮುಟ್ಟಿ ಮರಳಿ ಬರುತ್ತದೆಯೋ ಅದೇ ರೀತಿ ಸಂಸಾರ ಎಂಬುದರಲ್ಲಿ ಪತಿ ಪತ್ನಿ ಹಾಗೂ ಕುಟುಂಬಸ್ತರು ಸಮಭಾವನೆಯಿಂದ ನಡೆದುಕೊಂಡು ಹೋದರೆ ಮಾನವರಾದವರೆಲ್ಲರೂ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಸಾಧ್ಯವೆಂದರು. ಶ್ರೀ ರಾಮಚಂದ್ರನನ್ನು ಪ್ರೀತಿಯಿಂದ ಗೆದ್ದವ ಹನುಮಾನ ಅವರ ಭಕ್ತಿ ಸಾಮಾನ್ಯ ಭಕ್ತಿ ಅದಾಗಿದ್ದಿಲ್ಲ ಅದು ದೇವನೊಲಿಮೆ ಮಾಡಿಕೊಳ್ಳುವ ಭಕ್ತಿಯಾಗಿತ್ತೆಂದರು. ಶ್ರೀ ರಾಮಚಂದ್ರನಿಗೆ ನೀನು ನನ್ನ ಹೃದಯದಲ್ಲಿ ಇಡೀ ಅಂಗಾಂಗದಲ್ಲಿ ವಾಸವಾಗಿರುವೆ ಎಂದು ಶ್ರೀರಾಮಚಂದ್ರನಿಗೆ ಹನುಮಂತ ತನ್ನ ಎದೆ ಹರಿದುಕೊಂಡು ಶ್ರೀರಾಮಚಂದ್ರನಿಗೆ ಅವನ ಪ್ರತಿ ರೂಪತೊರಿಸಿ ಭಕ್ತಿ ಎಂಬುದು ಎಂತಹದ್ದಿದೆ ಎಂಬುದನ್ನು ಶ್ರೀ ರಾಮಚಂದ್ರನಿಗೆ ತೊರಿಸಿದ ಹನುಮಂತನ ಭಕ್ತಿ ಸಾಮಾನ್ಯದಲ್ಲ ಅಂತಹ ಮಾರುತೇಶ್ವರ ದೇವಾಲಯ ಹಾಗೂ ರಥವನ್ನು ನಿರ್ಮಾಣ ಮಾಡಿ ಇಂದು ಲೋಕಾರ್ಪಣೆಗೆ ಅನುವು ಮಾಡಿಕೊಟ್ಟಂತಹ ಆಶ್ರಯ ಬಡಾವಣೆಯ ಸಂಘಟಿಕರ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದರು.
ಮುಖ್ಯಅಥಿತಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆಯವರು ಮಾತನಾಡಿ ಆಶ್ರಯ ಬಡಾವಣೆಯ ಸಂಘಟಿಕರು ಹನುಮಂತ ದೇವರ ಮೆಲಿಟ್ಟ ಶ್ರದ್ಧಾ ಭಕ್ತಿ ಎಂಬುದನ್ನು ಕಳೆದ 14 ವರ್ಷಗಳಿಂದ ನೊಡುತ್ತಾ ಸಾಗಿ ಬಂದ್ದಿದ್ದೇನೆ ಸುಮಾರು 11ಲಕ್ಷರೂಪಾಯಿ ವೆಚ್ಚದ ಕಟ್ಟಿಗೆಯ ಶ್ರೀ ಮಾರುತೇಶ್ವರ ರಥವನ್ನು ನಿರ್ಮಾಣ ಮಾಡಿಸಿ ಲೋಕಾರ್ಪಣೆಗೆ ಅನುವು ಮಾಡಿ ಕೊಟ್ಟಂತಹ ಈ ಬಡಾವಣೆಯ ಸಂಘಟಿಕರು ಹಾಗೂ ನಾಗರಿಕರಲ್ಲಿ ಕೋಮು ಸೌಹಾರ್ದತೆ ಭಾವನೆ ಎದ್ದು ಕಾಣುತ್ತಿದೆ. ಇಂತಹ ಸೇವಾ ಕಾರ್ಯದಿಂದಲೇ ಜನ ಮೆಚ್ಚೆಗೆಗೆ ಹಾಗೂ ದೇವನೊಲಿಮೆ ಮಾಡಿಕೊಳ್ಳಲು ಪಾತ್ರರಾಗಬಹುದೆಂದು ಹೇಳಿದ ಅವರು ಇಡೀ ವಿಜಯಪುರ ಜಿಲ್ಲೆಯಲ್ಲಿಯೇ ತಾಳಿಕೋಟೆ ಆಶ್ರಯ ಬಡಾವಣೆಯಲ್ಲಿ ಇಂದು ಜರುಗಿದ ಮಾರುತೇಶ್ವರ ರಥ ಮೊದಲನೇಯದ್ದಾಗಿರಬಹುದೆಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ಶ್ರೀ ಖಾಸ್ಗತೇಶ್ವರ ಮಠದ ವೇ.ಮುರುಗೇಶ ವಿರಕ್ತಮಠ, ವೇ.ಗುರುಶಾಂತಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ವೇ. ಅನಂತಬಟ್ಟ ಜೋಷಿ, ಅರ್ಚಕರಾದ ಹನುಮಂತರಾಯ ನಿಂಗಪ್ಪ ಹೂಗಾರ, ವೇ. ಎಸ್.ಎಂ.ಬೇನಾಳಮಠ, ಶಿಕ್ಷಕರಾಧ ದೇವರಾಜ ಬಾಗೆವಾಡಿ, ಪ್ರಕಾಶ ಕಟ್ಟಿಮನಿ, ರಥದ ಶಿಲ್ಪಿ ರವಿ ನಾಗಪ್ಪ ಬಡಿಗೇರ, ಮಲ್ಲನಗೌಡ ಪಾಟೀಲ, ಮಹಾಧಾನಿಗಳಾದ ಘನಶಾಮ ಚೌವ್ಹಾಣ, ನರಸಿಂಗ ವಿಜಾಪೂರ, ಅರುಣ ದೊಡಮನಿ, ಮಲ್ಲನಗೌಡ ಮದರಕಲ್ಲ, ಶ್ರೀಮತಿ ಸುರೇಖಾ ಭಾಸುತ್ಕರ, ಶಿಕ್ಷಕಿ ಶ್ರೀಮತಿ ಪ್ರೇಮಾ ಲಕಣಾಪೂರ ಇವರೆಲ್ಲರೂ ಉಪಸ್ತಿತರಿದ್ದರಲ್ಲದೇ ಶ್ರೀಗಳಿಗೆ ಹಾಗೂ ಎಲ್ಲ ಅಥಿತಿ ಮಹೋದಯರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ನೂತನ ರಥಕ್ಕೆ ಶ್ರೀಗಳಿಂದ ಚಾಲನೆ ನೀಡಿದಾಗ ಅಸಂಖ್ಯಾತ ಭಕ್ತರು ರಥವನ್ನು ಏಳೆದು ಪಾದಗಟ್ಟೆಯವರೆಗೆ ಕೊಂಡೊಯ್ಯುದು ಮರಳಿ ಶ್ರೀ ಮಂದಿರದ ಆವರಣದಲ್ಲಿ ತರಲಾಯಿತು. ನಂತರ ಮಂದಿರದಲ್ಲಿ ಅಕ್ಕನಬಳಗದ ಸುಮಂಗಲೇಯರಿಂದ ಭಗವಾನ ಶ್ರೀ ಪವನಪುತ್ರ ಹನುಮಾನನ ತೊಟ್ಟಿಲು ಸೇವೆ ಹಾಗೂ ಜೋಗುಳ ಪದ ಜರುಗಿತಲ್ಲದೇ ನಂತರ ಸಮಸ್ತ ಭಕ್ತರು ಅನ್ನ ಪ್ರಸಾಧ ಸೇವಿಸಿ ಪುನಿತರಾದರು.