ಪಲ್ಸ ಆಕ್ಸಿಮಿಟರ್, ಥರ್ಮಲ್ ಸ್ಕ್ಯಾನರ್ ಕೊಡುಗೆ

ಬಾಗಲಕೋಟೆ,ಜೂ.4 : ಬೆಂಗಳೂರಿನ ಇನ್ಪೋಸಿಸ್ ಸಮರ್ಥನಾ ಟೀಮ್ ವತಿಯಿಂದ ನಾರಾಯಣ ಕುಲಕರ್ಣಿಯವರು 120 ಫಲ್ಸ್ ಆಕ್ಸಿ ಮೀಟರ್, 120 ಥರ್ಮಲ್ಸ್ ಸ್ಕ್ಯಾನರ್‍ಗಳನ್ನು ಗ್ರಾಮ ಪಂಚಾಯತಿಗಳಿಗೆ ವಿತರಿಸಲು ಜಿ.ಪಂ ಸಿಇಓ ಟಿ.ಭೂಬಾಲನ ಅವರಿಗೆ ಹಸ್ತಾಂತರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ ಸಿಇಓ ಟಿ.ಭೂಬಾಲನ ಅವರು ಸದರಿ ಫಲ್ಸ್ ಆಕ್ಸಿ ಮೀಟರ್ ಮತ್ತು ಥರ್ಮಲ್ ಸ್ಕ್ಯಾನರ್‍ಗಳನ್ನು ಗ್ರಾಮ ಪಂಚಾಯತಿಗಳಿಗೆ, ಗ್ರಾಮಗಳಲ್ಲಿ ಸಮೀಕ್ಷೆ ಮಾಡುವವರಿಗೆ ಹಾಗೂ ನರೇಗಾದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ತಪಾಸಣೆಗೆ ಅನುಕೂಲವಾಗಲಿದ್ದು, ಕೊಡುಗೆ ನೀಡಿದ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಲೆಕ್ಕಾಧಿಕಾರಿ ಸಿದ್ರಾಮೇಶ್ವರ ಉಕ್ಕಲಿ ಇದ್ದರು.