ಪಲ್ಸ್ ಲಸಿಕಾ ಅಭಿಯಾನ

ವಿಜಯಪುರ:ಮಾ.6:ರೋಟರಿ ಕ್ಲಬ್ ವಿಜಯಪುರ ಉತ್ತರ, ಸಂಜೀವಿನಿ ಫಾರ್ಮಸಿ ಮತ್ತು ಪ್ಯಾರಾಮೆಡಿಕಲ್ ಕಾಲೇಜ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಇಬ್ರಾಹಿಂಪುರ ಇವರ ಸಹಯೋಗದಲ್ಲಿ ಮಾರ್ಚ್ 3 ರಿಂದ 6 ರ ವರೆಗೆ ನಡೆಯಲಿರುವ ಪಲ್ಸ್ ಪೆÇೀಲಿಯೋ ಲಸಿಕಾ ಅಭಿಯಾನ ಕಾರ್ಯಕ್ರಮದಡಿ ಇಂದು 5 ವರ್ಷದ ಒಳಗಿರುವ ಮಕ್ಕಳಿಗೆ ಪೆÇೀಲಿಯೋ ಹನಿ ಹಾಕುವದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.
ರೋಟರಿ ಸಂಸ್ಥೆ ಉತ್ತರದ ಅಧ್ಯಕ್ಷರಾದ ಮಲ್ಲು ಕಲಾದಗಿ, ವೈದ್ಯರಾದ ಪಿ.ಎ. ಹಿಟ್ನಳ್ಳಿ, ಪ್ರೇಮಗೌಡ ಪಾಟೀಲ ಹಾಗೂ ಸಿಬ್ಬಂದಿ, ಸಂಜೀವಿನಿ ಫಾರ್ಮಸಿ ಹಾಗೂ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ ಸೊನ್ನದ ಹಾಗೂ ವಿದ್ಯಾರ್ಥಿಗಳು, ರೋಟರಿ ಸಂಸ್ಥೆ ಸದಸ್ಯರಾದ ಸುಧೀರ ಪವಾರ, ಉದಯ ಯಾಳವಾರ, ಗುರುಶಾಂತ ನಿಡೋಣಿ, ರಾಜ ಶಾಹ, ಅಕ್ಷಯ್ ವಾಡೆಕಾರ, ಬಸವರಾಜ ಕಡಪಟ್ಟಿ, ಡಾ|| ಮಲ್ಲಪ್ಪ ಹುಗ್ಗಿ, ಮುಖರ್ತಿಹಾಳ, ಇನ್ನರವೀಲ್ ಸಂಸ್ಥೆ ವಿಜಯಪುರ ಉತ್ತರದ ಅಧ್ಯಕ್ಷರಾದ ಸ್ಮಿತಾ ಪಾಟೀಲ ಉಪಸ್ಥಿತರಿದ್ದರು.