ಪಲ್ಸ್ ಪೋಲಿಯೋ ಲಸಿಕೆ ನೀಡುವ ಕುರಿತ ಪೂರ್ವಭಾವಿ ಸಭೆ

ಕಲಬುರಗಿ.ಜ.7: ಜ. 17ರಂದು ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕುರಿತ ಮಹಾನಗರ ಪಾಲಿಕೆಯ ಕಾರ್ಯಪಡೆ (ಟಾಸ್ಕ್ ಫೆÇೀರ್ಸ್)ಯ ಪೂರ್ವಭಾವಿ ಸಭೆಯು ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿತು.

ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಜ. 17 ರಂದು ನಗರ ಪ್ರದೇಶದ 0-5 ವರ್ಷದೊಳಗಿನ 90,223 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು. 310 ಪೋಲಿಯೋ ಲಸಿಕಾ ಕೇಂದ್ರ (08 ಸಂಚಾರಿ ಮೊಬೈಲ್ ತಂಡ)ಗಳಲ್ಲಿ 712 ಸಿಬ್ಬಂದಿಗಳಿಂದ 69 ಮೇಲ್ವಿಚಾರಕ ಅಧಿಕಾರಿಗಳಿಂದ ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ 38 ಟ್ರಾನ್ಸಿಟ್ ಕೇಂದ್ರಗಳಲ್ಲಿ ಪೆÇೀಲಿಯೊ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದರು.

ಡಬ್ಲ್ಯೂಟಿಓ ಕಣ್ಗಾವಲು ವೈದ್ಯಕೀಯ ಕಚೇರಿಯ ಅಧಿಕಾರಿ ಡಾ. ಅನಿಲಕುಮಾರ ಎಸ್. ತಾಳಿಕೋಟಿ ಅವರು ಪಿಪಿಟಿ ಪ್ರದರ್ಶನ ಮಾಡಿ, ಮಾಹಿತಿ ನೀಡಿದರು.

ಈ ಸಭೆಯಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಶೇಖರ ಮಾಲಿ, ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ಡಾ. ಎ. ಎಸ್. ರುದ್ರವಾಡಿ, ಆರ್‍ಸಿಎಚ್ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.