ಪಲ್ಸ್ ಪೊಲೀಯೋ ಕಾರ್ಯಕ್ರಮಕ್ಕೆ ಚಾಲನೆ


ಹುಬ್ಬಳ್ಳಿ,ಮಾ.3: ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿಂದು ಪೆÇೀಲಿಯೊ ದಿನದ ಅಂಗವಾಗಿ ಶಾಸಕರಾದ ಮಹೇಶ ಟೆಂಗಿನಕಾಯಿ ಅವರು 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೆÇೀಲಿಯೊ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ದೇಶದಲ್ಲಿ ಪೆÇೀಲಿಯೊ ಮುಕ್ತ ಭಾರತ ಅಭಿಯಾನ ನಿರಂತರವಾಗಿ ನಡೆಯುತ್ತಾ ಬಂದಿದ್ದು, ಅದರಂತೆ ಈ ವರ್ಷವೂ ಕೂಡಾ ಯಶಸ್ವಿಗೊಳಿಸಬೇಕು. ಅಲ್ಲದೆ ಪೆÇೀಲಿಯೊ ಕುರಿತಂತೆ ಜಾಗೃತಿ ಮೂಡಿಸಬೇಕು. ಯಾವ ಮಕ್ಕಳು ಕೂಡಾ ಪಲ್ಸ್ ಪೆÇೀಲಿಯೊದಿಂದ ವಂಚಿತರಾಗಬಾರದು ಎಂದರು.
ಆರೋಗ್ಯಾಧಿಕಾರಿಗಳಾದ ಡಾ. ಶ್ರೀಧರ ದಂಡೆಪ್ಪನವರ ಮಾತನಾಡಿ, ಇಂದಿನಿಂದ 4 ದಿನಗಳವರೆಗೆ ನಡೆಯುವ ಪಲ್ಸ್ ಪೆÇೀಲಿಯೊ ಅಭಿಯಾನದಲ್ಲಿ ಹು-ಧಾದ 1.25 ಲಕ್ಷ ಮಕ್ಕಳಿಗೆ ಪೆÇೀಲಿಯೊ ಹನಿ ಹಾಕುವ ಗುರಿ ಹೊಂದಲಾಗಿದ್ದು, ಈ ಮೂಲಕ 100 ಕ್ಕೆ 100 ರಷ್ಟು ಗುರಿ ಸಾಧಿಸುವ ಗುರಿ ಹೊಂದಲಾಗಿದೆ ಎಂದರು.
ಪಲ್ಸ್ ಪೆÇಲೀಸ್ ಕಾರ್ಯಕ್ರಮದಲ್ಲಿ ಹು-ಧಾ ಪಾಲಿಕೆ ಮೇಯರ್ ವೀಣಾ ಬರದ್ವಾಡ, ಪಾಲಿಕೆ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ, ಡಾ
ಪ್ರಕಾಶ್, ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.