ಪಲ್ಸ್ ಪೊಲಿಯೋ ಗ್ಲೋಬಲ್ ಹ್ಯಾಂಡ್ ವಾಷಿಂಗ್ ಡೇ ಆಚರಣೆ

ಹುಬ್ಬಳ್ಳಿ,ಅ30- ಪಲ್ಸ್ ಪೊಲಿಯೋ ದಿನ ಹಾಗೂ ಗ್ಲೋಬಲ್ ಹ್ಯಾಂಡ್ ವಾಷಿಂಗ್ ಡೇ (ಕೈ ತೊಳೆಯುವ ದಿನ)ದ ಅಂಗವಾಗಿ ನಗರದ ಹೊಸೂರನಲ್ಲಿರುವ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ ನಂ. 16 ರಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ವತಿಯಿಂದ ಮಕ್ಕಳು, ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ತಿಳುವಳಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕೋವಿಡ್-19 ನಿರ್ವಹಣೆ ಹಾಗೂ ಹ್ಯಾಂಡ್ ವಾಷಿಂಗ್‍ನ ವಿಧಿ-ವಿಧಾನಗಳ ಬಗ್ಗೆ ಡಾ. ನಾಗರೇಖಾ ಹೆಬಸೂರ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಪೊಲಿಯೋ ನಿರ್ಮೂಲನೆ ಬಗ್ಗೆ ಆಯುರ್ವೇದ ಕಾಲೇಜ್ ಪ್ರಾಧ್ಯಾಪಕರಾದ ಡಾ. ಆಯೆಶಾ ಮುಲ್ಲಾ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಉಚಿತವಾಗಿ ಮಾಸ್ಕ್, ಸ್ಯಾನಿಟೈಜರ್ ವಿತರಿಸಲಾಯಿತು. ಮಕ್ಕಳಿಗೆ ಕಲರ್ ಬುಕ್, ಪೆನ್ಸಿಲ್, ಸ್ವೀಟ್ ಬಾಕ್ಸ್‍ಗಳನ್ನು ಹಂಚಲಾಯಿತು.
ಇನ್ನರ್‍ವ್ಹೀಲ್ ಕ್ಲಬ್‍ನ ಜ್ಯೋತಿ ನಡಕಟ್ಟಿ, ರಾಜಶ್ರೀ ವಾಸುಕಿ, ಅಂಗನವಾಡಿ ಕಾರ್ಯಕರ್ತೆ ಜರೀನಾ ಉಪಸ್ಥಿತರಿದ್ದರು.