ಪಲ್ಲಾ ಅವರ ಸೇವಾ ಮನೋಭಾವನೆ ಇತರರಿಗೆ ಮಾದರಿಯಾಗಲಿ:ಬಿರಾದಾರ

ಸೈದಾಪುರ:ಜು.22:ಪಲ್ಲಾ ಅವರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿರುವ ಸೇವಾ ಮನೋಭಾವನೆಯ ಕಾರ್ಯ ಇತರರಿಗೆ ಮಾದರಿಯಾಗಲಿ ಎಂದು ಸೈದಾಪುರ ನಾಡ ಕಚೇರಿಯ ಉಪತಹಸಿಲ್ದಾರ ಸಂಗಮೇಶ ಬಿರಾದಾರ ಮದ್ರಕಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಸಂಘದ ಉಪಾಧ್ಯಕ್ಷ ಶಿಕ್ಷಣ ಪ್ರೇಮಿ ಲಕ್ಷ್ಮೀಕಾಂತ ರೆಡ್ಡಿ ಪಲ್ಲಾ ಅವರು ವೈಯಕ್ತಿಕವಾಗಿ ತಾಯಿ ದಿಂವಗತ ಪಲ್ಲಾ ವೆಂಕಟಮ್ಮ ತಂದೆ ದಿ.ಪಲ್ಲಾ ಭೀಮರೆಡ್ಡಿ ಇವರ ಸ್ಮರಣಾರ್ಥ 2021-22 ನೇ ಸಾಲಿನ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾ ವರ್ಧಕ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪ್ರಥಮ ಹಾಗೂ ದ್ವಿತೀಯ ಸ್ಥಾನದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರೋತ್ಸಾಹ ಧನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನಾನು ಕೆಎಎಸ್ ಹಾಗೂ ಐಎಎಸ್ ಓದುವ ವಿದ್ಯಾರ್ಥಿಗಳಿಗೆ ದೆಹಲಿ ಸೇರಿದಂತೆ ಹೈದಾರಬಾದದಲ್ಲಿ ನೀಡುವ ತರಬೇತಿಗೆ ನೆರವು ನೀಡುತ್ತೇನೆ. ಇದರ ಸದುಪಯೋಗ ಈ ಭಾಗದವರು ಪಡೆದುಕೊಳ್ಳಲಿ ಎಂದು ಹೇಳಿದರು.
ಇದಕ್ಕೂ ಮುಂಚೆ ಕಲಾ ವಿಭಾಗದಲ್ಲಿ ನವೀನ, ಐಶ್ವರ್ಯ, ವಾಣಿಜ್ಯ ವಿಭಾಗದಲ್ಲಿ ಅಂಜಮ್ಮ, ದೇವಪ್ಪ, ವಿಜ್ಞಾನ ವಿಭಾಗದಲ್ಲಿ ಮಂಜುಳಾ, ಭಾಗ್ಯಶ್ರೀ ಅವರುಗಳಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ, ಉಪಾಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ ಪಲ್ಲಾ, ಕಾರ್ಯದರ್ಶಿ ಬಸವರಾಜ ಪಾಟೀಲ ಕ್ಯಾತನಾಳ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಸಿದ್ರಾಮಪ್ಪಗೌಡ ಗೊಂದೆಡಗಿ, ನಿವೃತ್ತಾ ಮುಖ್ಯಗುರು ಬಿ.ಬಿ.ಹೆಬ್ಬಾಳೆ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲರುಗಳಾದ ಹಂಪಣ್ಣ ಸಜ್ಜನಶೆಟ್ಟಿ, ಕರಸಬಯ್ಯ ದಂಡಿಗಿಮಠ, ಉಪನ್ಯಾಸಕರಾದ ಸದಾಶಿವ ಗುಡಸಲಿ, ವರ್ಷರಾವ್, ಚೈತ್ರಾ, ಭರತಕುಮಾರ, ಸೌಭಾಗ್ಯ ಲಕ್ಷ್ಮೀ, ಶ್ವೇತಾ ರಾಘವೇಂದ್ರ ಪೂರಿ, ಹಣಮಂತ ಸೇರಿದಂತೆ ಇತರರಿದ್ದರು.