ಪಲ್ಲಾಗಟ್ಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಶಿವಗಂಗಮ್ಮ ಅವಿರೋಧ ಆಯ್ಕೆ

ಜಗಳೂರು.ನ.೧೧: ಪಲ್ಲಾಗಟ್ಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಶಿವಗಂಗಮ್ಮ ಕೋಂ ಬಸವರಾಜಪ್ಪ ನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್‌ ಕಿಮಾವತ್ ಘೋಷಿಸಿದರು.ಈ ಹಿಂದಿನ ಅಧ್ಯಕ್ಷರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗೋಡೆ ಗ್ರಾ.ಪಂ.ಸದಸ್ಯೆ ಶಿವಗಂಗಮ್ಮ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ  ಶಿವಗಂಗಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಅಧಿಕಾರಿ ಘೋಷಣೆ ಮಾಡಿದರು.ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ಗಾಯತ್ರಮ್ಮ.ಸದಸ್ಯರಾದ ಹೊನ್ನಮ್ಮ.ಪ್ರಕಾಶ್.ರತ್ನಮ್ಮ ಗುರುಸ್ವಾಮಿ. ರೇಣುಕಮ್ಮ ಗುರುಮೂರ್ತಿ.ರತ್ನಮ್ಮ ನಾರಪ್ಪ. ದಿವ್ಯ ಸತೀಶ್. ಯಲ್ಲಮ್ಮ ಬಸವರಾಜ್. ವೀರಪ್ಪ. ಶೇಖರಪ್ಪ. ಸಿದ್ದೇಶ್. ಬಿಡ್ದಪ್ಪ. ಪಿ.ಬಿ.ವಿರುಪಾಕ್ಷಪ್ಪ, ಕಲ್ಲೇಶ್. ಮುರುಗೇಶಿ. ಪಂಚಾಯಿತಿ ಸಿಬ್ಬಂದಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು