ಪಲಾವ್‌ ಎಲೆ ಪ್ರಯೋಜನ

ಸಾಂಬಾರು ಪದಾರ್ಥಗಳಿಗೆ ಅತ್ಯಂತ ಹೆಸರುವಾಸಿಯಾದ ದೇಶ ನಮ್ಮದು, ಬಹಳ ಹಿಂದಿನಿಂದಲೂ ಕೂಡ ನಾವು ಇಡೀ ಜಗತ್ತಿಗೆ ಅತ್ಯಂತ ಬೇಡಿಕೆಯ ಮರುಕಟ್ಟೆಯಾಗಿದ್ದೆವು. ಭಾರತೀಯರ ಆಹಾರ ಅಭ್ಯಾಸ ಕೇವಲ ಬಾಯಿಗೆ ಮಾತ್ರ ರುಚಿಕರವಲ್ಲ ಇಡೀ ನಮ್ಮ ದೇಶಕ್ಕೆ ಬೇಕಾಗುವ ಎಲ್ಲ ರೋಗನಿರೋಧಕ ಶಕ್ತಿಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಹೀಗಾಗಿ ಭಾರತದ ಪ್ರತಿಯೊಂದು ಆಹಾರಾಭ್ಯಾಸಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಇನ್ನು ನಾವು ಪಲಾವ್ ಮತ್ತು ರೈಸ್ ಬಾತ್ ಗಳಲ್ಲಿ ಹೆಚ್ಚು ಬಳಸುವ ಬೇ ಎಲೆ ಅಥವಾ ಪಲಾವ್ ಎಲೆ ಎಂದು ಕರೆಸಿಕೊಳ್ಳುವ ಈ ಎಲೆಯನ್ನು ನೀವು ಬಹಳಷ್ಟು ನೋಡಿರಬಹುದು.
ಈ ಎಲೆಯನ್ನು ಕೇವಲ ಸುವಾಸನೆಗೆ ಮಾತ್ರ ಬಳಸುತ್ತಾರೆ ಎಂದುಕೊಂಡರೆ ಅದು ನಿಮ್ಮ ದೊಡ್ಡ ತಪ್ಪು. ಈ ಪಲಾವ್ ಎಲೆಯ ಅನೇಕ ಉಪಯೋಗಗಳು ಇಂದಿಗೂ ಕೂಡ ಹಲವರಿಗೆ ತಿಳಿದಿಲ್ಲ. ಆಹಾರಗಳಲ್ಲಿ ಉಪಯೋಗಿಸುವ ಈ ಪಲಾವ್ ಎಲೆ ಕೇವಲ ಸುವಾಸನೆ ನೀಡುವುದಲ್ಲದೆ ಆರೋಗ್ಯಕ್ಕೂ ಕೂಡ ಬಹಳ ಉಪಕಾರಿ. ಆಹಾರಗಳಲ್ಲಿ ಉಪಯೋಗಿಸುವ ಈ ಎಲೆ ಹೇರಳವಾದ ವಿಟಮಿನ್ ಎ ಮತ್ತು ವಿಟಮಿನ್ ಸಿ ಹಾಗು ಕಬ್ಬಿಣ ಮತ್ತು ಕಾಲ್ಸಿಯಂ ಅಂಶಗಳನ್ನು ಹೊಂದಿದೆ. ಸಾಮಾನ್ಯವಾಗಿ ಈ ಎಲೆಯನ್ನು ಹಸಿಯಾಗಿ ಹೆಚ್ಚು ದಿನ ಇಡಲು ಸಾಧ್ಯವಾಗುವುದಿಲ್ಲ ಅದಕ್ಕಾಗಿ ಮಾರುಕಟ್ಟೆಯಲ್ಲಿ ಇದನ್ನು ಬಹಳ ಒಣಗಿಸಿದ ನಂತರ ಪ್ಯಾಕೇಜ್ ಪ್ಯಾಕೇಜ್ ಮಾಡಿ ನೀಡುತ್ತಾರೆ.
ಒಣಗಿಸಿದರೂ ಕೂಡ ಇದರ ಪೌಷ್ಟಿಕಾಂಶ ದಲ್ಲಿ ಯಾವುದೇ ಕೊರತೆ ಇರುವುದಿಲ್ಲ. ಈ ಎಲೆಗಳನ್ನು ಕೇವಲ ಆಹಾರಕ್ಕಾಗಿ ಮಾತ್ರ ಬಳಸುವುದಿಲ್ಲ ಬದಲಿಗೆ ಬಹಳ ಹಿಂದಿನಿಂದಲೂ ಔಷದ ತಯಾರಿಕೆ ಹಾಗು ಮನೆ ಮದ್ದುಗಳಾಗಿ ಬಳಸುತ್ತಿದ್ದರು. ಬೇ ಎಲೆಯ ಸುವಾಸನೆಯು ಅದರ ರುಚಿಗಿಂತ ಮುಖ್ಯವಾಗಿದೆ. ಬೇ ಎಲೆಗಳು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿವೆ. ಪ್ರಾಚೀನ ಕಾಲದಿಂದಲೂ ಇದನ್ನು ಯಕೃತ್ತು, ಕರುಳು ಮತ್ತು ಮೂತ್ರಪಿಂಡದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಜೇನುನೊಣ ಕಡಿತದ ಮೇಲೆ ಗಾಯದ ಸ್ಥಳದಲ್ಲಿ ಇದನ್ನು ಅನೇಕ ಬಾರಿ ಬಳಸಲಾಗುತ್ತದೆ. ಈ ದಿನಗಳಲ್ಲಿ ಅನೇಕ ಸಣ್ಣ ರೋಗಗಳ ತಡೆಗಟ್ಟುವಿಕೆಗಾಗಿ ಅನೇಕ ಜನರು ಇದನ್ನು ಬಳಸುತ್ತಿದ್ದಾರೆ. ರಷ್ಯಾದಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಒತ್ತಡವನ್ನು ನಿವಾರಿಸಲು ಬೇ ಎಲೆಗಳನ್ನು ಬಳಸಬಹುದು ಎಂದು ಕಂಡುಬಂದಿದೆ. ಸ್ವಲ್ಪ ಪಲಾವ್ ಎಲೆಯನ್ನು ಮನೆಯ ಎಲ್ಲ ಕಿಟಕಿ ಬಾಗಿಲುಗಳನ್ನು ಮುಚ್ಚಿ ಸುಡಿ. ಒಂದು ಹದಿನೈದು ನಿಮಿಷಗಳ ನಂತರ ಎಲ್ಲ ಬಾಗಿಲನ್ನು ತೆರೆಯಿರಿ ಅವಾಗ ನಿಮಗೆ ಸಿಗುವ ಆ ಸುವಾಸನಾ ಭರಿತ ಗಾಳಿಯು ನಿಮ್ಮ ಒತ್ತಡವನ್ನು ನಿವಾರಿಸುವುದಲ್ಲದೆ, ಶಾಂತಿಯನ್ನು ನೀಡುತ್ತದೆ. ಇದರ ಉಸಿರಾಟ ಬಹಳ ಒಳ್ಳೆಯದು ಎಂದು ಹೇಳಲಾಗಿದೆ.
ಇದು ಸೊಳ್ಳೆ ಜಿರಲೆಗಳಿಗೂ ಕೂಡ ಪರಿಣಾಮಕಾರಿಯಾಗಿದೆ. ಜಿರಳೆ ಇರುವ ಸ್ಥಳದಲ್ಲಿ ಈ ಎಲೆ ಪುಡಿ ಮಾಡಿ ಹಾಕಿದರೆ ಇನ್ನೆಂದು ಆ ಸ್ಥಳದಲ್ಲಿ ತೊಂದರೆ ಇರುವದಿಲ್ಲ. ಈ ಎಲೆಗಳು ಆಯುರ್ವೇದದಲ್ಲಿ ಕೂಡ ಬಹಳ ಮುಖ್ಯವಾದ ಪಾತ್ರ ವಹಿಸಿದೆ. ಮಧುಮೇಹಕ್ಕೆ ಕೂಡ ಇದು ಪರಿಣಾಮಕಾರಿ ಔಷಧವಾಗಿದೆ. ಯಾವುದೇ ಕಾರಣಕ್ಕೂ ಕೂಡ ನೀವು ಈ ಎಲೆಯನ್ನು ನೇರವಾಗಿ ಸೇವನೆ ಮಾಡಲು ಹೋಗಬೇಡಿ ಇದು ಅತ್ಯಂತ ದೊಡ್ಡ ತಪ್ಪು. ಆಹಾರದಲ್ಲಿ ಚೆನ್ನಾಗಿ ಬೆಂದ ಬಳಿಕವೇ ಇದು ದೇಹವನ್ನು ಸೇರಿ ಸತ್ವಗಳನ್ನು ನೀಡುತ್ತದೆ.