ಪರ್ವತಾರೋಹಿಗೆ ಪ್ರೋತ್ಸಾಹ


(ಸಂಜೆವಾಣಿ ವಾರ್ತೆ)
ಬೆಂಗಳೂರು:ಫೆ.29; ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ನಂದಿತಾ ನಾಗನ್ ಗೌಡರ್ ಎಂಬ ಗ್ರಾಮೀಣ ಕ್ರೀಡಾಪಟು.  ಜಗತ್ತಿನ ಅತೀ ಎತ್ತರದ 4 ಶಿಖರಗಳನ್ನು ಹತ್ತಿ, ಇದೀಗ 5ನೇ ಶಿಖರ ಹತ್ತಲು ಮುಂದಾಗಿದ್ದು. ಈ ಸಾಧಕಿಗೆ ನಿನ್ನೆ ವಿಧಾನಸೌಧದಲ್ಲಿ ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಕ್ರೀಡಾ  ಸಚಿವ ಬಿ.ನಾಗೇಂದ್ರ  ಅಭಿನಂದಿಸಿ ಪ್ರೋತ್ಸಾಹಿಸಿದರು.
ಮುಂದಿನ ದಿನಗಳಲ್ಲಿ  ಕ್ರೀಡಾ ಇಲಾಖೆಯಿಂದ ಆರ್ಥಿಕ ಸಹಾಯ ಮತ್ತು ಕ್ರೀಡಾ ಪ್ರಶಸ್ತಿ ನೀಡಲಾಗುವುದು ಎಂದು ಸಚಿವ ಬಿ.ನಾಗೇಂದ್ರ ಅವರು ತಿಳಿಸಿದರು.