ಪರ್ಯಟನೆ ಖಾಸಗಿ ವಿಡಿಯೋ ಆಲ್ಬಮ್ ನ.೧೨ ಬಿಡುಗಡೆ

ರಾಯಚೂರು.ನ.೦೮- ಪರ್ಯಟನೆ ವಿಡಿಯೋ ಆಲ್ಬಮ್ ನ.೧೨ ರಂದು ಯೂಟೂಬ್ ಮೂಲಕ ಬಿಡುಗಡೆ ಮಾಡಲಾಗುತ್ತದೆಂದು ಹವ್ಯಾಸಿ ಕಲಾವಿದ ಬಸವರಾಜ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಚಲನಚಿತ್ರಗಳಿಗೆ ಸಾಹಿತ್ಯ ರಚನೆ ಸೇರಿದಂತೆ ಹಾಡು ರಚಿಸುವ ಹವ್ಯಾಸ ಹೊಂದಿದ ನಾನು ಪರ್ಯಟನೆ ಎನ್ನುವ ವಿಡಿಯೋ ಆಲ್ಬಮ್ ಮಾಡಲಾಗಿದೆ. ನ.೧೨ ರಂದು ಯೂಟೂಬ್‌ನಲ್ಲಿ ಇದನ್ನು ಬಿಡುಗಡೆಗೊಳಿಸಲಾಗುತ್ತದೆ. ಸ್ಥಳೀಯ ಕಲಾವಿದರಾದ ನಾನು ವಿಡಿಯೋ ಆಲ್ಬಮ್‌ಗಾಗಿ ವಿವಿಧ ಪ್ರದೇಶಗಳ ಚಿತ್ರಕರಣದೊಂದಿಗೆ ಖಾಸಗಿ ಲ್ಬಮ್ ಮಾಡಲಾಗಿದೆ. ಸುಮಾರು ೪೦ ಸಾವಿರ ವೆಚ್ಚದಲ್ಲಿ ಇದನ್ನು ಮಾಡಿದ್ದೇನೆ. ಕೆ.ಟಿ.ಮಿಲ್ಲನ್ ಕುಮಾರ ಎನ್ನುವವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಖಾಸಗಿ ಆಲ್ಬಮ್ ವಿಕ್ಷೀಸುವ ಮೂಲಕ ಪ್ರೇಕ್ಷಕರು ಸ್ಥಲೀಯ ಕಲಾವಿದರಿಗೆ ಬೆಂಬಲಿಸುವಂತೆ ಮನವಿ ಮಾಡಿದ ಅವರು, ಈ ವಿಡಿಯೋ ಆಲ್ಬಮ್ ಮಾಡಲು ಅನೇಕರು ಸಹಕರಿಸಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ನಾಗರಾಜ ಮಲ್ಲಿಕಾರ್ಜುನ, ಬಸವರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.