ಪರ್ತಕರ್ತರ ಶ್ರೇಯಾಭಿವೃದ್ಧಿಗೆ ನಿಗಮ ಮಂಡಳಿ ರಚನೆಗೆ ಗೌಡರು ಆಗ್ರಹ

ಲಿಂಗಸುಗೂರ,ಜು.೦೨-
ಪಟ್ಟಣದ ಪತ್ರಿಕಾ ಭವನದಲ್ಲಿ ಸರಳವಾಗಿ ಪತ್ರಿಕಾ ದಿನಾಚರಣೆ ಆಚರಣೆ ಮಾಡಲಾಯಿತು ಪತ್ರಿಕಾ ದಿನಾಚರಣೆಯನ್ನು ಡಾ.ಜಿ. ಗುಂಡಪ್ಪನವರ ಬಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ರಾಜ್ಯದಲ್ಲಿ ಪತ್ರಿಕಾ ವರದಿಗಾರರಿಗೆ ಅವರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹಾಗೂ ಪತ್ರಕರ್ತರ ಶ್ರೇಯಾಭಿವೃದ್ಧಿಗೆ ನಿಗಮ ಮಂಡಳಿ ರಚನೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಮತ್ತು ವರದಿಗಾರರಿಗೆ ರಕ್ಷಣೆ ಮಾಡಿಕೊಳ್ಳಲು ಸರ್ಕಾರ ವಿಶೇಷ ಕಾನೂನನ್ನು ಜಾರಿಗೆ ತರುವ ಮೂಲಕ ಪತ್ರಕರ್ತರ ಹಿತರಕ್ಷಣಾ ಕಾಪಾಡಲು ಮುಂದಾಗಬೇಕು ಎಂದು ಲಿಂಗಸುಗೂರು ತಾಲೂಕಿನ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಗುರುರಾಜ ಗೌಡರು ಇವರು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಪತ್ರಿಕಾ ದಿನಾಚರಣೆ ಆಚರಣೆ ಸಂದರ್ಭದಲ್ಲಿ ಲಿಂಗಸುಗೂರ ಹಿರಿಯ ಪತ್ರಕರ್ತರಾದ ನಾಗರಾಜ ಮಸ್ಕಿ ಮಾತನಾಡಿದ ಅವರು ತಮ್ಮ ಅನುಭವವನ್ನು ಪತ್ರಕರ್ತ ರಿಗೆ ಸಮಾಜದಲ್ಲಿ ಗೌರವ ಇದೆ ಆದರೆ ಅವರಿಗೆ ಸೇವೆಗೆ ತಕ್ಕಂತೆ ಯಾವುದೇ ಗೌರವ ಧನ ಇಲ್ಲಾ ಸರಕಾರದಿಂದ ಯಾವುದೇ ಸೌಲಭ್ಯ ಗಳು ಇಲ್ಲಾ ತಮ್ಮ್ ವಯಕ್ತಿಕ ಅನುಭವವನ್ನು ಕಳೆದ ವರ್ಷ ನನಗೆ ಹೃದಯ ಘಾತ ವಾದಗ ನನಗೆ ಆಪರೇಷನ್ ಮಾಡಲು ಸುಮಾರು ೧೩ ಲಕ್ಷ ರೂಪಾಯಿಗಳು ಬೇಕಾಗಿದ್ದು ನಾವು ಇಷ್ಟೊಂದು ದೊಡ್ಡ ಹಣವನ್ನು ಜೋಡಿಸುವುದು ತುಂಬಾ ಕಷ್ಟ ಈ ಸಂದರ್ಭದಲ್ಲಿ ನಮ್ಮ ಪತ್ರಕರ್ತ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರ ಭೇಟಿ ನೀಡಿ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಸುಮಾರು ೧೩ ಲಕ್ಷ ರೂಪಾಯಿಗಳನ್ನು ಪರಿಹಾರ ಒದಗಿಸಿದರು. ಈ ಸಂದರ್ಭದಲ್ಲಿ ಬಾವುಕರಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಲಿಂಗಸುಗೂರ ತಾಲ್ಲೂಕಿನ ಕಾರ್ಯ ನಿರತ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷರಾದ ಗುರುರಾಜ ಗೌಡುರು, ಕಾರ್ಯದರ್ಶಿ ಅಮರಯ್ಯ ಘಂಟಿ, ಹಿರಿಯ ಪತ್ರಕರ್ತರಾದ ಬಿ.ನಂದಿಕೊಲಮಠ, ಘನಮಠದಯ್ಯ್ ಸ್ವಾಮಿ, ನಾಗರಾಜ ಮಸ್ಕಿ ಖಾಜಾಹುಸೇನ್, ದುರುಗಪ್ಪ ಹೊಸಮನಿ ರವಿಕುಮಾರ ಸೂರ್ಯವಂಶಿ, ರಾಘವೇಂದ್ರ, ಗೌತಮ ಕುಮಾರ, ಬಸಲಿಂಗಪ್ಪ ಪಂಪಾಪತಿ, ಡಿ.ಜಿ.ಶಿವು, ಗಂಗಾಧರ ನಾಯಕ್, ರವಿಕುಮಾರ ಹೊಸಮನಿ, ಸಾದತ ಅಲಿ, ಕಿಶೋರ್ ಹಟ್ಟಿ ಹಾಗೂ ಮುದಗಲ್ ಭಾಗದ ಪತ್ರಕರ್ತರು ಉಪಸ್ಥಿತರಿದ್ದರು.