ಪರೋಪಕಾರದಿಂದ ಮನುಷ್ಯ ಜನ್ಮಕ್ಕೆ ಪುಣ್ಯ ಪ್ರಾಪ್ತಿ:ಜಗದ್ಗುರು

ತಾಳಿಕೋಟೆ:ನ.12: ಮನುಷ್ಯ ಜನ್ಮಕ್ಕೆ ಅರ್ಥ ಮತ್ತು ಪುಣ್ಯ ಬರಬೇಕಾದರೆ ಪರೋಪಕಾರ, ದಾನ, ಧರ್ಮ ಒಳ್ಳೆಯತನಗಳಿಂದ ಪೂರಕವಾಗಿ ಉಪಯೋಗ ಮಾಡಿಕೊಳ್ಳುತ್ತೇವೋ ಆವಾಗ ಪುಣ್ಯ ಪ್ರಾಪ್ತಿಯಾಗುವದರ ಜೊತೆಗೆ ಈ ಜನ್ಮಕ್ಕೆ ಅರ್ಥವೆಂಬುದು ಬರುತ್ತದೆ ಎಂದು ಎಂದು ಶ್ರೀಶ್ರೀಶ್ರೀ 1008 ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಜಗದ್ಗುರು ಮಹಾಸ್ವಾಮಿಗಳವರ ದ್ವಾದಶ ಪೀಠಾರೋಹಣ ಮಹೋತ್ಸವ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಶುಕ್ರವಾರರಂದು ತಾಲೂಕಿನ ಬಿ.ಸಾಲವಾಡಗಿ ಗ್ರಾಮದಲ್ಲಿ ಯಡಿಯೂರದಿಂದ ಆರಂಭಗೊಂಡ ಪಾದಯಾತ್ರೆಯೊಂದಿಗೆ ಆಗಮಿಸಿ ಗ್ರಾಮದಲ್ಲಿ ಏರ್ಪಡಿಸಲಾದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು ಧರ್ಮವನ್ನು ಹೇಳಲಿಕ್ಕೆ, ಧರ್ಮವನ್ನು ಕೇಳಲಿಕ್ಕೆ ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿಕ್ಕೆ ಅವಕಾಶ ಇರುವ ಏಕೈಕ ಜೀವ ಮನುಷ್ಯನಾಗಿದ್ದಾನೆ, ಉಳಿದ ಯಾವ ಪ್ರಾಣಿಗಳಿಗೂ ಯಾವ ಧರ್ಮವೂ ಇಲ್ಲಾ ಆದರೆ ಮನುಷ್ಯನಿಗೆ ಮಾತ್ರ ಹೀಗೆ ಇರಬೇಕು ಇದೇ ರೀತಿ ಆಚಾರ ವಿಚಾರಗಳು ಇರಬೇಕೆನ್ನುವಂತಹ ಧರ್ಮದ ಕಟ್ಟಳೆಗಳು ಮನುಷ್ಯನಿಗೆ ಇವೆ ಈ ಧರ್ಮದ ಕಟ್ಟಳೆಗಳನ್ನು ಮನುಷ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅದಕ್ಕೆ ಯಾವ ಮನುಷ್ಯ ಧರ್ಮವನ್ನು ಅಳವಡಿಸಿಕೊಳ್ಳುತ್ತಾನೋ ಆತ ಪೂರ್ಣ ಪ್ರಮಾಣದ ಮನುಷ್ಯನಾಗುತ್ತಾನೆ ಒಂದು ವೇಳೆ ಧರ್ಮವನ್ನು ಕಳೆದುಕೊಂಡರೆ ಪಶುಗಳಿಗಿಂತಲೂ ಕೀಳಾಗಿ ಸಮಾಜದಲ್ಲಿ ಕಾಣುತ್ತಾನೆಂದರು. ಅದಕ್ಕೆ ಮನುಷ್ಯರಾಗಿ ಉಳಿಯಬೇಕಾಗಿದ್ದರೆ ಧರ್ಮವನ್ನು ಅಳವಡಿಸಿಕೊಳ್ಳಬೇಕು ಪರೋಪಕಾರ, ದಾನ, ವನ್ನು ಮೈಗೂಡಿಸಿಕೊಳ್ಳಬೇಕೆಂದರು. ಅಂತಹ ಧರ್ಮ ಉಳಿವಿಗಾಗಿ ಪಾದಯಾತ್ರೆಯನ್ನು ಕೈಗೊಳ್ಳಲಾಗಿದೆ ಎಂದರು.

ಪಾದಯಾತ್ರಾ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಮಾತನಾಡಿ ಜಗದ್ಗುರುಗಳು ಕೈಗೊಂಡಿರುವ ಪಾದಯಾತ್ರೆಯ ಉದ್ದೇಶ ನಮ್ಮ ದೇಶದ ಸನಾತನ ಸಂಸ್ಕøತಿ ಉಳಿಯಬೇಕು ಬೆಳೆಯ ಬೇಕೆಂಬ ಉದ್ದೇಶವಾಗಿದೆ ದಾನ ಧರ್ಮಕ್ಕೆ ಶ್ರೀಮಂತಿಕೆ ಎಂಬುದು ಬೇಕಿಲ್ಲಾ ಮನಸ್ಸಿನಿಂದ ಬಯಸಿದರೆ ಮನೆಯಲ್ಲಿ ಮಾಡುವ ಮೊದಲನೇಯ ರೋಟ್ಟಿಯನ್ನು ಮಠಮಾನ್ಯಗಳಿಗೆ ಅರ್ಪಿಸುವಂತಹ ಕಾರ್ಯವಾಗಬೇಕಿದೆ ಮತ್ತು ದುಡಿಮೆಯ ಮೊದಲನೇಯ ನಾಣ್ಯವನ್ನು ಸಮಾಜಕ್ಕೆ ಬಳೆಸುವಂತಹ ಪ್ರವೃತ್ತಿ ಮನುಷ್ಯನಲ್ಲಿ ಬರಬೇಕಿದೆ ಇದರಿಂದ ನಮ್ಮ ಸನಾತನ ಸಂಸ್ಕøತಿ, ಸಂಸ್ಕಾರ ಉಳಿದುಕೊಳ್ಳಲು ಸಾಧ್ಯವೆಂದರು.

ಪಾದಯಾತ್ರೆಯ ಮೂಲಕ ಆಗಮಿಸಿದ ಜಗದ್ಗುರುಗಳನ್ನು ಬಿ.ಸಾಲವಾಡಗಿ ಗ್ರಾಮದ ಜನರು ವಿವಿಧ ವಾದ್ಯ ವೈಭವಗಳೊಂದಿಗೆ ಕುಂಭ ಕಳಸ, ಪಾದಪೂಜೆಯೊಂದಿಗೆ ಭವ್ಯವಾಗಿ ಸ್ವಾಗತಿಸಿ ವೇದಿಕೆಗೆ ಕರೆತಂದರು.

ಇದೇ ಸಮಯದಲ್ಲಿ ಜಗದ್ಗುರುಗಳಿಗೆ ಗ್ರಾಮಸ್ಥರ ವತಿಯಿಂದ ಸನ್ಮಾನಿಗೌರವಿಸಲಾಯಿತು.

ಈ ಸಮಯದಲ್ಲಿ ನಾವದಗಿ ಶ್ರೀ ರಾಜೇಂದ್ರ ಒಡೆಯರ ಸ್ವಾಮಿಗಳು, ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಗೂಳಬಾಳಶ್ರೀಗಳು, ಶ್ರೀ ಸೂಗೂರೇಶ್ವರ ಶಿವಾಚಾರ್ಯರು ಶಹಾಪೂರ, ಕೊಡೇಕಲ್ಲ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮಿಗಳು, ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಅವರ ಸಹೋದರ ಸುರೇಶಗೌಡ ಪಾಟೀಲ(ಸಾಸನೂರ), ರಾಜುಗೌಡ ಪಾಟೀಲ(ಕು.ಸಾಲವಾಡಗಿ), ಬಸನಗೌಡ ವಣಕ್ಯಾಳ, ಶರಣಗೌಡ ಪಾಟೀಲ(ಯಾಳಗಿ), ಸಂತೋಷ ದೊಡಮನಿ, ಗುರುಗೌಡ ಗುರಡ್ಡಿ, ಮುದಕಣ್ಣಗೌಡ ರಾರಡ್ಡಿ, ಮಲ್ಲನಗೌಡ ಪೋಲೀಸ್‍ಪಾಟೀಲ, ರಾಜು ಕೊಳೂರ, ಕುಮಾರಗೌಡ ಅನಂತರಡ್ಡಿ, ಮುದುಗೌಡ ಪಾಟೀಲ, ನಿಂಗನಗೌಡ ಅನಂತರಡ್ಡಿ, ರಾಜುಗೌಡ ಯಾಳಗಿ, ಮಲ್ಲನಗೌಡ ಯಾಳಗಿ, ಶಂಕರಗೌಡ ಯಾಳಗಿ, ನಾನಾಗೌಡ ಯಾಳಗಿ, ಮೊದಲಾದವರು ಉಪಸ್ಥಿತರಿದ್ದರು.