ಪರೋಪಕಾರಕ್ಕಾಗಿ ಮಿಡಿಯುವ ಹೃದಯವೇ ಶ್ರೇಷ್ಠ ಆಸ್ತಿ: ಹಾರಕೂಡ ಶ್ರೀ

Oplus_131072

ಬೀದರ್:ಮೇ.31: ಪರೋಪಕಾರಕ್ಕಾಗಿ ಮಿಡಿಯುವ ಹೃದಯ ಹಾಗೂ ತವಕಿಸುವ ಕೈಗಳು ಮನುಷ್ಯನ ನಿಜವಾದ ಆಸ್ತಿ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಖೇರ್ಡ್ ಕೆ. ಗ್ರಾಮದ ಸಮಸ್ತ ಭಕ್ತರಿಂದ ಆಯೋಜಿಸಿದ ಭಕ್ತಿ ನಮನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಹಾರಕೂಡ ಪೂಜ್ಯರು, ಅನ್ಯರ ಧನ ಕನಕಾದಿಗಳ ಆಪೇಕ್ಷ ಇಲ್ಲದೆ ಸ್ವಂತ ದುಡಿಮೆಯ ಫಲವನ್ನು ಅನುಭವಿಸುತ್ತ ನೆಮ್ಮದಿಯ ಶ್ರೀಮಂತಿಕೆ ಮೆರೆಯಬೇಕು.
ಸ್ವಂತ ಪರಿಶ್ರಮದ ಫಲದಲ್ಲಿ ಒಂದಷ್ಟು ದಾಸೋಹದಲ್ಲಿ ಭಕ್ತಿಯಿಂದ ವಿನಿಯೋಗಿಸಿ ಸಮಾಜಮುಖಿಯಾಗಿ ಬದುಕನ್ನು ಸವಿಸಿದರೆ ಧನ್ಯತೆ ಲಭಿಸುತ್ತದೆ.
ಚಿತ್ತ ಶುದ್ದಿ ಭಕ್ತಿಯ ಪರಿಮಳದಿಂದ ಭಗವಂತ ತೃಪ್ತನಾಗಿ ಅಂತ:ಕರಣದ ವೃಷ್ಠಿ ಸುರಿಸುತ್ತಾನೆ.
ನಮಗೆ ದೇವರ ನೆರಳು ಬೇಕಾದರೆ ನಾವು ಬದುಕಿನಲ್ಲಿ ಇನ್ನೊಬ್ಬರಿಗೆ ನೆರಳಾಗಿರಬೇಕು.
ಬದುಕು ಭಕ್ತಿಯ ಸೌದವಾದಾಗ ಅಲ್ಲಿ ಭಗವಂತನ ಬೆಳಕು ಚಿರಸ್ಥಾಯಿಯಾಗಿ ಉಳಿಯಲು ಸಾಧ್ಯವಾಗುತ್ತದೆ.
ಭಕ್ತಿಯಲ್ಲಿ ಸದಾ ಹಿರಿತನವನ್ನು ಮೆರೆಯುತ್ತಿರುವ ಖೇರ್ಡ್ ಕೆ. ಗ್ರಾಮದ ಜನತೆಯ ಬಾಳು ಯಾವತ್ತೂ ಹಸಿರಾಗಿರಲಿ ಎಂದು ಶುಭ ಹಾರೈಸಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಸಿದ್ರಾಮಪ್ಪ ಗುದಗೆ, ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮೇಘರಾಜ ನಾಗರಾಳೆ, ಬಿಕೆಡಿಬಿ ಮಾಜಿ ಅಧ್ಯಕ್ಷರಾದ ರಾಜಕುಮಾರ ಬಿರಾದಾರ ಸಿರಗಾಪೂರ, ಸುಭಾಷ ಮುರುಡ ವಿಜಯಕುಮಾರ ಸಂಗೋಳಾಗಿ, ಆನಂದರಾವ ಝಳಕೆ ಉಪಸ್ಥಿತರಿದ್ದರು.
ಭಕ್ತಿ ನಮನ ಕಾರ್ಯಕ್ರಮ ನಿಮಿತ್ಯ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರಿಗೆ ಖೇರ್ಡ್ ಕೆ. ಗ್ರಾಮದ ಸಮಸ್ತ ಸದ್ಭಕ್ತರು 650ನೇ ತುಲಾಭಾರ ನೆರವೇರಿಸಿ ಆಶೀರ್ವಾದ ಪಡೆದರು.
ರವೀಂದ್ರ ರಾಯಜಿ ಸ್ವಾಗತಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿ ಕೊಟ್ಟರು.
ಶರಣಬಸಪ್ಪ ಪಾರಪ್ಪಗೋಳು ಕಾರ್ಯಕ್ರಮವನ್ನು ನಿರೂಪಿಸಿದರು.
ಸಂತೋಷ ಅಳ್ಳೆ ವಂದಿಸಿದರು.
ನಾಗೇಂದ್ರಪ್ಪ ಪಾಟೀಲ, ಗುಂಡೇರಾವ ಪಾಟೀಲ, ಪರಮೇಶ್ವರ ಪೂಜಾರಿ, ಧೂಳಪ್ಪ ಪಾಟೀಲ, ಅಪ್ಪರಾವ ಗುರುಪಾದಪ್ಪ, ಸೂರ್ಯಕಾಂತ ಪಾಟೀಲ, ನಾಗೇಂದ್ರಪ್ಪ ಭೂತೆ, ಮಧುರಾವ ಪಾಟೀಲ ಬಸವರಾಜ ನಾಟಿಕರ್ ಭಾಗವಹಿಸಿದ್ದರು.
ಗ್ರಾಮಸ್ಥರಿಂದ ಹಾರಕೂಡ ಶ್ರೀಗಳ ಅದ್ದೂರಿ ಮೆರವಣಿಗೆ
ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಹಾರಕೂಡ ಪೂಜ್ಯರನ್ನು ಸಮಸ್ತ ಗ್ರಾಮಸ್ಥರು ಗ್ರಾಮದ ಹೊರವಲಯದಿಂದ ಭಕ್ತಿ ಶ್ರದ್ಧೆಯಿಂದ ಅಲಂಕೃತ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಸಮಾರಂಭದ ವೇದಿಕೆಗೆ ಬರಮಾಡಿಕೊಂಡರು.
ಮೆರವಣಿಗೆಯಲ್ಲಿ ಭಜನೆ, ಡೊಳ್ಳು ಕುಣಿತ, ಬೆಂಡು ಬಾಜಾ, ಹಲಿಗೆವಾದನ, ಲಂಬಾಣಿ ಹಾಗೂ ಕುಂಭ ಕಳಸ ಹೊತ್ತ ಮಹಿಳೆಯರು ಭಾಗವಹಿಸಿದ್ದರು.