ಪರೀಕ್ಷೆ ರದ್ದು ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ

ವಾಡಿ:ಜೂ.5: ರಾಜ್ಯ ಸರ್ಕಾರ ಜೂನ್ 4 ರಂದು ದ್ವಿತೀಯ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಬಗ್ಗೆ ತನ್ನ ನಿರ್ಧಾರವನ್ನು ಹೋರಡಿಸಿದೆ. ಅದರ ಪ್ರಕಾರ ದ್ವಿತೀಯ ಪಿಯುಸಿ ಪರಿಕ್ಷೇಗಳು ರದ್ದು ಮಾಡಲಾಗಿದೆ ಮತ್ತು ಒಂದು ವೈಜ್ಞಾನಿಕ ಮೌಲ್ಯ ಮಾಪನದ ಮೂಲಕ ಎಲ್ಲರನ್ನೂ ತೇರ್ಗಡೆಗೊಳಿಸಲು ನಿರ್ಧರಿಸಿದ್ದಾರೆ. ಇದು ವಿಧ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ ಆರ್ಗನೈಸೇಷೆನ್ ಅಧ್ಯಕ್ಷ ಗೌತಮ ಪರತೂರಕರ್ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಇಚ್ಛೆಯುಳ್ಳ ವಿದ್ಯಾರ್ಥಿಗಳು ಪರಿಕ್ಷೆ ಬರೆಯಲು ಅವಕಾಶ ನೀಡುತ್ತೇವೆ ಎಂದು ಸರ್ಕಾರ ಹೇಳಿದೆ. ಹತ್ತನೇ ತರಗತಿ ಮೂಲ ವಿಷಯಗಳು ಸೇರಿ ಒಂದು ಪತ್ರಿಕೆ, ಭಾಷ ವಿಷಯಗಳು ಸೇರಿ ಒಂದು ಪತ್ರಿಕೆಯಾಗಿ, ಎರೆಡು ಪತ್ರಿಕೆಗಳಲ್ಲಿ ಬಹು ಆಯ್ಕೆ ಪ್ರಶ್ನೆಯ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. (ಎ) ಅಥವಾ (ಎ+) ಶ್ರೇಣಿ ನೀಡಿ, ಯಾರನ್ನು ಅನುತ್ತೀರ್ಣ ಗೊಳಿಸದೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ವಿದ್ಯಾರ್ಥಿಗಳು ಪೋಷಕರು, ಶಿಕ್ಷಣಪ್ರೇಮಿ ಜನತೆಯ ಹೋರಾಟ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ಬಲವಾಗಿ ನಂಬುತ್ತದೆ.

ಎಐಡಿಎಸ್‍ಓ ಸಂಘಟನೆ ಪರೀಕ್ಷೆ ರದ್ದಾಗಬೇಕೆಂದು ವಿದ್ಯಾರ್ಥಿಗಳು ಅಭಿಪ್ರಾಯ ಸಂಗ್ರಹಿಸಲು ಗೂಗಲ್ ಫಾರ್ಮ ಅನ್ನು ಬಿಡುಗಡೆ ಮಾಡಿತ್ತು. ಇದನ್ನು ಸುಮಾರು 15,000ಕ್ಕು ಹೆಚ್ಚು ವಿದ್ಯಾರ್ಥಿಗಳು ಸಹಿ ಮಾಡಿದ್ದಾರೆ ಮತು ಶೇ.86 ರಷ್ಟು ವಿದ್ಯಾರ್ಥಿಗಳ ಅಭಿಪ್ರಾಯ ಪರೀಕ್ಷೆ ರದ್ದಾಗಬೇಕು ಎಂದು ಇತ್ತು. ಈ ಅಭಿಪ್ರಾಯ ಪರೀಕ್ಷೆ ಭಯದಿಂದ ಬಂದಿರುವುದಲ್ಲ. ಬದಲಿಗೆ ವಿದ್ಯಾರ್ಥಿಗಳಿಗೆ ತಮ್ಮ ಆರೋಗ್ಯ ಹಾಗೂ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಬಂದಂತಹ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ನೋಡಿದಾಗ, ಸರ್ಕಾರದ ಪರೀಕ್ಷೆ ರದ್ದತಿಯ ನಿರ್ಧಾರ ಸ್ವಾಗತಾರ್ಹ.