ಪರೀಕ್ಷೆ ಮುಂದೂಡಲು ‌ಮನವಿ

ಬಳ್ಳಾರಿ ಏ 17 : ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಬೇಕೆಂದು ಪರೀಕ್ಷಾಂಗ ಕುಲ ಸಚಿವ ರಮೇಶ್. ಎಸ್ ಉದ್ದಿಕೇರಿ ಅವರಿಗೆ ಎಐಡಿಎಸ್ ಓದ ನಿಯೋಗ ಇಂದು ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಐಡಿಎಸ್ ಓದ ಜಿಲ್ಲಾ ಅಧ್ಯಕ್ಷ ಗುರಳ್ಳಿ ರಾಜ, ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ ಹಾಗೂ ಜಿಲ್ಲಾ ಸೇಕ್ರೆಟರಿಯಟ್ ಸದಸ್ಯರಾದ ಕೆ.ಈರಣ್ಣ, ಎಂ.ಶಾಂತಿ, ಅನುಪಮ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.