ಪರೀಕ್ಷೆ ಮುಂದೂಡಲು ಅಗ್ರಹ

ಧಾರವಾಡ,ಏ19: ರಾಜ್ಯದಲ್ಲಿ ಎರಡನೇಯ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ 17 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ದೃಡಪಟ್ಟಿದ್ದು. ಸಂಪರ್ಕಿತ ವಿದ್ಯಾರ್ಥಿಯನ್ನು ಪತ್ತೆಹಚ್ಚಿ ಕ್ವಾರಂಟೈನ್ ಒಳಪಡಿಸಲಾಗುತ್ತಿದೆ. ಹೀಗಿರುವಾಗ ಕವಿವಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಭಯಪಡುತ್ತಿದ್ದು. ಪರೀಕ್ಷೆಯನ್ನು ಅನಿರ್ದಿಷ್ಟಾವದಿ ಮುಂದೂಡಲು ಒತ್ತಾಯ ಕೇಳಿ ಬರುತ್ತಿದೆ.
ಮಹಾಮಾರಿ ಕೊರೊನಾ ವೈರಸ್ ಹಾಸ್ಟಲ್‍ಗಳಿಗೂ ಒಕ್ಕರಿಸಿಕೊಳ್ಳುತ್ತಿದ್ದು. ಗೌರಿ ಶಂಕರ ಹಾಸ್ಟಲ್ 10 ಕೆಸಿಡಿ ಕಾಲೇಜಿನಲ್ಲಿನ ಹಾಸ್ಟಲ್ 07 ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ 13 ವಿದ್ಯಾರ್ಥಿಗಳು ಕೋವಿಡ್-19 ದೃಡಪಟ್ಟಿದೆ. ಹಾಸ್ಟಲ್‍ಗಳನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಹೀಗಾಗಿ ಭಯದಿಂದ ವಿದ್ಯಾರ್ಥಿಗಳು ನಮಗೆ ಪ್ರಾಣ ಮುಖ್ಯ ಪರೀಕ್ಷೆ ಮುಖ್ಯ ಅಲ್ಲ ಎಂದು ಹಾಸ್ಟಲ್‍ಗಳನ್ನು ತೊರೆದು ಮನೆಯ ಹಾದಿ ಹಿಡಿಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಬಸ್ ಮುಷ್ಕರ ನಡೆಯುತ್ತಿದ್ದು. ಕೆಲವು ನಗರಗಳಲ್ಲಿ ಮಾತ್ರ ಬಸ್ ಸಂಚಾರ ಆರಂಭವಾದರೂ ಸಮಯಕ್ಕೆ ಸರಿಯಾಗಿ ಬಸ್ ಇರುವುದಿಲ್ಲ ಜೊತೆಗೆ ಗ್ರಾಮೀಣ ಬಸ್‍ಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಹೀಗಿರುವಾಗ ಕರ್ನಾಟಕ ವಿಶ್ವವಿದ್ಯಾಲಯ ಮಾತ್ರ ತಮಗೇನೂ ಸಂಬಂಧ ಇಲ್ಲ ಅನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಿರುವುದು ಸ್ಟಷ್ಟವಾಗಿ ಕಂಡುಬರುತ್ತಿದೆ. ಈ ವರ್ತನೆ ವಿದ್ಯಾರ್ಥಿಗಳಿಗೆ ಪ್ರಾಣ ಸಂಕಟ ಕವಿವಿ ಚೆಲ್ಲಾಟ ಎಂಬಂತಾಗಿದೆ.
ಕವಿವಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದು. ವಿಶ್ವವಿದ್ಯಾಲಯ ಮಾತ್ರ ಪರೀಕ್ಷೆ ಬರೆಯಲೆಬೇಕು ಎಂಬ ವಾದವನ್ನು ಮಂಡಿಸುತ್ತಿರುವುದು ನೋಡುಗರ ಕಣ್ಣಿಗೆ ಸ್ಪಷ್ಟವಾಗಿ ಕಂಡುಬರುತ್ತಿದೆ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಸಾಧ್ಯವಾದಷ್ಟು ಕವಿವಿ ಪರೀಕ್ಷೆಗಳನ್ನು ಅನಿರ್ದಿಷ್ಟಾವದಿ ಮುಂದೂಡಲು ವಿದ್ಯಾರ್ಥಿಗಳು ಒತ್ತಾಯಿಸಿದರು.