ಪರೀಕ್ಷೆ ಮಾಡಿದ್ದು 3651 ಪಾಸಿಟಿವ್ ಬಂದಿದ್ದು 2322

ಬಳ್ಳಾರಿ, ಮೇ.19: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವಿಕೆ ಪ್ರಮಾಣ ಮಿತಿ ಮೀರುತ್ತಿದೆ. ಪರೀಕ್ಷೆವಮಾಡಿದ ಜನರಲ್ಲಿ ಶೇ 60 ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸತೊಡಗಿದೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ನಿನ್ನೆ 3651 ಜನರನ್ನು ಪರೀಕ್ಷೆ ಮಾಡಿದರೆ 2,322 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. 17 ಜನರು ಮೃತಪಟ್ಟಿದ್ದಾರೆ.
76,728 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದರೆ, ಮೃತರ ಸಂಖ್ಯೆ 1,090 ಕ್ಕೆ ತಲುಪಿದೆ. ಈ ವರಗೆ 56,265 ಜನ‌ಗುಣ ಮುಖರಾಗಿದ್ದಾರೆ.
ಬಳ್ಳಾರಿ ನಗರದಲ್ಲಿ ಇನ್ನೂ 19,373 ಸಕ್ರಿಯ ಪ್ರಕರಣಗಳಿವೆ. ನಿನ್ನೆ ದಿನ ಬಳ್ಳಾರಿ- 842, ಸಂಡೂರು- 200, ಸಿರುಗುಪ್ಪ- 117, ಹೊಸಪೇಟೆ- 631, ಎಚ್.ಬಿ.ಹಳ್ಳಿ- 91, ಕೂಡ್ಲಿಗಿ – 181, ಹರಪನಹಳ್ಳಿ- 94, ಹಡಗಲಿ- 157 ಮತ್ತು ಹೊರ ರಾಜ್ಯದಿಂದ 7 ಮತ್ತು ಹೊರ ಜಿಲ್ಲೆಯಿಂದ 2 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
19373 ಜನರು ಆಸ್ಪತ್ರೆ ಮತ್ತು ಹೋಮ್ ಐಸೊಲೇಷನ್ ನಲ್ಲಿ ಇದ್ದಾರೆ.