ಪರೀಕ್ಷೆಯ ಅವಧಿ ಇಳಿಕೆ ಖಂಡಿಸಿ ಮನವಿ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮಾ.12 . ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಪದವಿ ಪರೀಕ್ಷೆ ಅವಧಿಯನ್ನು ಇಳಿಕೆಗೊಳಿಸಿ ಆದೇಶಿಸಿರುವುದು ವಿರೋಧಿಸಿ ಎಸ್ಎಫ್ಐ ಸಂಘಟನೆಯ ಪದಾಧಿಕಾರಿಗಳು ಪಟ್ಟಣದ ಪ್ರಥಮ ದರ್ಜೆ ಕಾಲೇಜ್ ಮುಂಭಾಗದಲ್ಲಿ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಜಿಲ್ಲಾ ಎಸ್ ಎಫ್ ಐ ಮುಖಂಡ ಜಯ ಸೂರ್ಯ ಮಾತನಾಡಿ   ವಿಶ್ವವಿದ್ಯಾಲಯದ  NEP ಸುತ್ತೆಲೆಯೊಂದರಲ್ಲಿ ಪರೀಕ್ಷೆ ಅವಧಿಯನ್ನು ಕಡಿಮೆಗೊಳಿಸಿ ಹೊರಡಿಸುವ ಸುತ್ತೊಲೆಯಂತೆ ನಿಯಮಾವಳಿಯಲ್ಲಿ ಕಾಣಿಸಿರುವ ಸಮಯ ನಿಗದಿ ಅವೈಜ್ಞಾನಿಕತೆಯಿಂದ ಕೂಡಿದ್ದು ಪರೀಕ್ಷೆಯ ಅವಧಿಯನ್ನು 3 ತಾಸಿಗೆ ಕಡಿಮೆಯಿಲ್ಲದೆ ಹಳೆಯ ನಿಯಮವನ್ನು ಮುಂದುವರಿಸಬೇಕು ಅಥವಾ ಪರೀಕ್ಷಾ ಪತ್ರಿಕೆಯ ಮಾದರಿಯನ್ನಾದರು ಬದಲಾವಣೆ ಮಾಡಬೇಕು  ಹಾಗೂ ಒಂದನೆಯ ಮತ್ತು ಎರಡನೇ  ಸಮಿಸ್ಟರ್ ಫಲಿತಾಂಶವನ್ನು ಇದುವರೆಗೂ ಪ್ರಕಟಿಸಿದೆ ವಿಳಂಬ ಮಾಡಿರುವುದು  ತೀರ್ವ ಖಂಡನೀಯ,  ಕೂಡಲೇ ಫಲಿತಾಂಶ ಪ್ರಕಟಿಸಿ ಅಂಕಪಟ್ಟಿಯನ್ನು ನೀಡಬೇಕು ಎಂದು ಆಗ್ರಹಿಸಿದರು  ,
ವಿಶ್ವವಿದ್ಯಾಲಯವು ಹೊಸ ನಿಯಮಾವಳಿಯ ಹೆಸರಿನಲ್ಲಿ ಪರೀಕ್ಷೆಯ ಶುಲ್ಕ ಮತ್ತು ಪ್ರವೇಶ ಶುಲ್ಕ ಹೆಚ್ಚು ಮಾಡಿರುವುದು ಖಂಡನೀಯವಾದದ್ದು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ವಿದ್ಯಾರ್ಥಿಗಳಾದ ನಮಗೆ, ಉಚಿತ ಪ್ರವೇಶಕ್ಕೆ ಅನುವುಮಾಡಿಕೊಡಬೇಕು . ಯಾವದೇ ರೀತಿಯ ತಾಂತ್ರಿಕ ಸಮಸ್ಯೆಗಳು ಬರದಂತೆ ಕಾಲಕಾಲಕ್ಕೆ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಬೇಕು, ಮತ್ತು ಪರೀಕ್ಷೆ ಅವಧಿಯನ್ನು ಕಡ್ಡಾಯವಾಗಿ ಮೊದಲಿನಂತೆ 3 ತಾಸಿಗೆ ಹೆಚ್ಚಿಸಲೇಬೇಕು ಎಂದು ಮನವಿಯನ್ನು ಮಾಡಿಕೊಳ್ಳುತ್ತಿದ್ದೇವೆ ,  ಇಲ್ಲವಾದಲ್ಲಿ ವಿದ್ಯಾರ್ಥಿಗಳು  ಭಾರತ ವಿದ್ಯಾರ್ಥಿ ಫೆಡರೇಶನ್ ಸಂಘಟನೆ ಮೂಲಕ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಕ್ಕೆ  ಮುತ್ತಿಗೆ ಹಾಕಲಾಗುವುದು ಎಂದು ತಿಳಿಸುತ್ತಿದ್ದೇವೆ ಎಂದು ವಿದ್ಯಾರ್ಥಿ ನಾಯಕರು ಹೇಳಿದರು.  ಮಹೇಶ್ , ಚಂದ್ರ,ಸೋಮೇಶ್,ಪ್ರದೀಪ್,ಕಾರ್ತಿಕ್, ನಾಗರಾಜ್ ಇತರೆ ಎಸ್ ಎಫ್ ಐ ವಿದ್ಯಾರ್ಥಿ ನಾಯಕರುಗಳು ಇದ್ದರು