ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಕಠಿಣ ಶ್ರಮ ಮತ್ತು ತಾಳ್ಮೆ ಅತ್ಯವಶ್ಯಕ


ಹಾವೇರಿ:ಏ.20: ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ಕಠಿಣ ಶ್ರಮ ಮತ್ತು ತಾಳ್ಮೆ ಅತ್ಯವಶ್ಯಕವಾಗಿದೆ. ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೆ ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಂಡು ಸತತ ಅಧ್ಯಯನ ನಡೆಸಿದರೆ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಸಂಪರ್ಕ ಅಧಿಕಾರಿ ಪ್ರಶಾಂತ ಕಾಳಗಿ ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬೆಂಗಳೂರು ಜನ ಆರೋಗ್ಯ ಕೇಂದ್ರ ಎಪಿಡೀಮಿಯಾಲಜಿ ವಿಭಾಗ ನಿಮ್ಹಾನ್ಸ ವಿಭಾಗದ ಆಶ್ರಯದಲ್ಲಿ ಬಂಕಾಪುರ ಕೊಟ್ಟಿಗೇರಿ ಸರಕಾರಿ ಪ್ರೌಡಶಾಲೆಯಲ್ಲಿ ಜರುಗಿದ ಶಿಕ್ಷಕರಿಗೆ ಮತ್ತು ವಿಧ್ಯಾರ್ಥಿಗಳಿಗೆ ವಿಶೇಷ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಆರೋಗ್ಯ ಮತ್ತು ಶಿಕ್ಷಣ ಅತ್ಯವಶ್ಯಕವಾಗಿದೆ. ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನದಿಂದ ತಮ್ಮ ಬೆಳವಣಿಗೆಯ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಎಸ್.ಎಸ್.ಎಲ್. ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಒತ್ತಡವನ್ನು ಎದುರಿಸಲು ಆತ್ಮಸ್ಥೈರ್ಯ ತುಂಬುವಲ್ಲಿ ಯುವ ಸ್ಪಂದನ ಸಹಾಯಕಾರಿ ಎಂದು ಹೇಳಿದರು.
ಯುವ ಸ್ಪಂದನದ ಯುವ ಪರಿವರ್ತಕ ಸಂಜೀವಕುಮಾರ.ಬಿ. ಅವರು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ವೃತ್ತಿ ವಿಷಯಗಳು, ಸಂಬಂಧಗಳು, ಸುರಕ್ಷತೆ ಆರೋಗ್ಯ ಮತ್ತು ಜೀವನ ಶೈಲಿ, ಲಿಂಗ ಮತ್ತು ಲಿಂಗತ್ವ ವಿಷಯಗಳ ಕುರಿತು ಅರಿವು ಮೂಡಿಸಿದರು. ಯುವಸ್ಪಂದನ ದೂರವಾಣಿ ಸಂಖ್ಯೆ08375-232080 ಕರೆಮಾಡಿ ಮಾಹಿತಿ ಪಡೆದುಕೊಳ್ಳಲು ತಿಳಿಸಿದರು.
ಪ್ರೌಢಶಾಲೆ ಮುಖ್ಯೋಪಾದ್ಯಾಯರಾದ ಶ್ರೀಮತಿಕವಿತಾ ಅಧ್ಯಕ್ಷತೆವ ಹಿಸಿದ್ದರು. ಶಿಕ್ಷಕರು ಹಾಗೂ ಇತೆರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ರಾಜ್ಯದ್ಯಾದಂತ ಕೋವಿಡ್-19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕೇಂದ್ರ/ ರಾಜ್ಯ ಸರ್ಕಾರಗಳು ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶಗಳಲ್ಲಿ ವಿಧಿಸಿರುವ ನಿರ್ಭಂಧಗಳು, ಮಾರ್ಗಸೂಚಿಗಳು, ನಿಯಮಗಳು ಹಾಗೂ ನಿರ್ದೇಶನಗಳನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲು ಹಾಗೂ ಅವುಗಳನ್ನು ಪಾಲಿಸುತ್ತಿರವ ಬಗ್ಗೆ ಪರಿಶೀಲಿಸಲಸು ಮತ್ತು ನಿಗಾವಹಿಸಲು ಗ್ರಾಮ ಪಂಚಾಯತ/ ನಗರ/ ಪಟ್ಟಣಗಳ ಮಟ್ಟದಲ್ಲಿ ಸೆಕ್ಟರ್ ಅಧಿಕಾರಿಗಳನ್ನು ನೇಮಿಸುವುದು ಅವಶ್ಯವಿರುವುದರಿಂದ ಈ ಕೆಳಗಿನಂತೆ ನಗರ ಸ್ಥಳಿಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ ಮಟ್ಟದಲ್ಲಿ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಬೇಕಾಗಿರುತ್ತದೆ.