
ದಾವಣಗೆರೆ, ಮಾ.೧೯; ಪ್ರೌಢ ಶೈಕ್ಷಣಿಕ ಹಂತ ವಿದ್ಯಾರ್ಥಿ ಜೀವನದ ಪರಿವರ್ತನೆಯ ಪರ್ವಕಾಲ ಮಕ್ಕಳು ಮುಂದಿನ ಉತ್ತಮ ಸಾಧನೆಯ ಗುರಿಮುಟ್ಟಲು ಈಗಾಗಲೇ ಒಂದು ನಿಖರವಾದ ನಿರ್ಧಾರದೊಂದಿಗೆ ಸಂಕಲ್ಪ ಮಾಡುವ ಅಗತ್ಯವಿದೆ. ಮುಂದಿನ ಅತ್ಯುನ್ನತ ವಿದ್ಯಾಭ್ಯಾಸಕ್ಕೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯೇ ಮಾನದಂಡವಾಗಿರುತ್ತದೆ. ಉತ್ತಮ ಫಲಿತಾಂಶ ತಂದ ಮಕ್ಕಳು ಯಾವುದೇ ಪದವಿಗಳ ವಿದ್ಯಾರ್ಚನೆಗೆ ಪೋಷಕರಿಗೆ ಆರ್ಥಿಕವಾಗಿ ಉಳಿಸಬಹುದು. ಪರೀಕ್ಷೆ ಹತ್ತಿರದಲ್ಲೇ ಇದ್ದು ಭಯಬಿಟ್ಟು ಹಬ್ಬದಂತೆ ಸಂಭ್ರಮಿಸಿ ಯಶಸ್ಸುಗಳಿಸಿ ಎಂದು ಕಲಾಕುಂಚ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಸಿರಿಗೆರೆಯ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮತ್ತು ಶಿರಮಗೊಂಡನಹಳ್ಳಿ ಕ್ಲಸ್ಟರ್ ಸಂಯುಕ್ತಾಶ್ರಯದಲ್ಲಿ ನಿನ್ನೆ ದಿನ ದಾವಣಗೆರೆ ಜಿಲ್ಲೆಯ ಬೆಳವನೂರು ಪ್ರೌಢಶಾಲಾ ಆವರಣದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಉಚಿತ ಕಾರ್ಯಾಗಾರ ನಡೆಸಿಕೊಟ್ಟ ಶೆಣೈಯವರು ಶಿಕ್ಷಣ ಸಂಸ್ಥೆಯ ಅಧಿಕಾರಿಗಳ, ಶಿಕ್ಷಕ, ಶಿಕ್ಷಕಿಯರ ಅನುಮತಿ ಪಡೆದು ಮಕ್ಕಳಿಗೆ ಉತ್ತಮ ಫಲಿತಾಂಶಕ್ಕಾಗಿ ಪ್ರತಿಜ್ಞಾವಿಧಿ ಬೋಧಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರಾದ ಲಿಂಗಣ್ಣನವರು ಮಾತನಾಡಿ, ಶೈಕ್ಷಣಿಕ ಕಾಳಜಿ ಕೇವಲ ಶಿಕ್ಷಕರಿಗೆ ಸೀಮಿತವಾಗದೇ ಪೋಷಕರೂ ಬದ್ಧೆತೆಯಿಂದ ಮಕ್ಕಳನ್ನು ಉತ್ತೇಜಿಸಬೇಕು. ಕಳೆದ ಮೂರು ದಶಕಗಳಿಂದ ಕಲಾಕುಂಚದ ನಿರಂತರವಾಗಿ ಕ್ರಿಯಾಶೀಲತೆಯಿಂದ ನಡೆದು ಬಂದ ದಾರಿ ನಿಜಕ್ಕೂ ದಾವಣಗೆರೆ ನಗರಕ್ಕೆ ಹೆಮ್ಮೆ ತರುವ ವಿಚಾರ ಎಂದರು.ದಕ್ಷಿಣ ವಲಯ ಕೇಂದ್ರ ಕ್ಷೇತ್ರ ಸಂಪನ್ಮೂಲ ಬಿ.ಆರ್.ಪಿ. ವೀಣಾ ಟಿ., ಶಿರಮಗೊಂಡನಹಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರೇಣುಕಾ ಡಿ. ಬೆಳವನೂರಿನ ಮಾಗನೂರು ಬಸಪ್ಪ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಕಾಶ್, ಸಲಹಾ ಸಮಿತಿ ಸದಸ್ಯರಾದ ಮಂಜಣ್ಣ, ಹನುಮಂತಣ್ಣ, ವಿಜಯಣ್ಣ, ಕಲಾಕುಂಚ ಸಕ್ರಿಯ ಸದಸ್ಯರಾದ ಬಿ.ಎಸ್.ವೀರೇಶ್, ಕೆ.ಸಿ.ಉಮೇಶ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕುಮಾರಿ ಅಂಕಿತಾರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಸಹ ಶಿಕ್ಷಕಿ ರೂಪಾ ಎಂ.ಬಿ. ಸ್ವಾಗತಿಸಿದುರ. ವಾಣಿ.ಎಸ್.ಬಿ. ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಅರ್ಥಗರ್ಭಿತವಾಗಿ ಮಕ್ಕಳನ್ನು ಹುರಿದುಂಬಿಸಿ ಉತ್ತೇಜನದೊಂದಿಗೆ ಪರೀಕ್ಷೆಗೆ ಮಾನಸಿಕವಾಗಿ ಆತ್ಮಸ್ಥೆöÊರ್ಯ ತುಂಬಿ ಕಾರ್ಯಾಗಾರ ನಡೆಸಿಕೊಟ್ಟ ಗಣೇಶ್‌ಶೆಣೈಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊನೆಯಲ್ಲಿ ಶಿಕ್ಷಕಿ ಸಪ್ನಾ ಯು. ವಂದಿಸಿದರು.