ಪರೀಕ್ಷೆಯನ್ನು ಇಷ್ಟಪಟ್ಟು ಎದುರಿಸಿ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 26 :- ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಹೆದುರಿಸಲು ಉತ್ತಮ ವ್ಯಾಸಂಗ ಮಾಡುವ ಮೂಲಕ ಪೂರ್ವ ಸಿದ್ಧತೆ ಮಾಡಿಕೊಂಡಲ್ಲಿ ಅದು ಕಷ್ಟವೆನಿಸದು ಈ ಪರೀಕ್ಷೆಯನ್ನು ಇಷ್ಟಪಟ್ಟು ಎದುರಿಸುವ ಮೂಲಕ ತಮ್ಮ ಅಮೂಲ್ಯವಾದ ಮುಂದಿನ ವ್ಯಾಸಂಗಕ್ಕೆ  ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕೂಡ್ಲಿಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ ಕಿವಿಮಾತು ಹೇಳಿದರು.
ಇಂದು ಬೆಳಿಗ್ಗೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ನಡೆಸಿದ ಪರೀಕ್ಷಾ ಸಿದ್ಧತೆಯ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ  ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾಡುವ ಪಾಠ ಮನಮುಟ್ಟುವಂತಿರಬೇಕು ಅಲ್ಲದೆ ಉತ್ತಮ ವ್ಯಾಸಂಗಮಾಡುವ ಮೂಲಕ ವಿದ್ಯಾರ್ಥಿಗಳು ಎಂತಹ ಪರೀಕ್ಷೆಗೂ ಸಿದ್ದ ಎನ್ನುವ ಮಟ್ಟಿಗೆ ಮಕ್ಕಳು ತಯಾರಾಗಬೇಕು ಎಂದು ಬಿಇಓ ಉಪಯುಕ್ತ ಮಾಹಿತಿ ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಜೂನಿಯರ್  ಕಾಲೇಜಿನ ಉಪಪ್ರಚಾರ್ಯ ಬಸವರಾಜ ಕೂಡ್ಲಿಗಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ ಶಿವರಾಜ, ಶಿಕ್ಷಕರುಗಳಾದ ಬಾಸ್ಕರ್, ಶಿವು, ಇತರೆ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.

One attachment • Scanned by Gmail