ಪರೀಕ್ಷಾ ಕೇಂದ್ರ ಇಲ್ಲದೆ ದೂರದ ಊರುಗಳಿಗೆ ಆಲೆಯುವಂತಾದ ಮಕ್ಕಳು

ಮಸ್ಕಿ.ಜ.೧೮- ತಾಲ್ಲೂಕು ಕೇಂದ್ರಕ್ಕಿಲ್ಲ ವಸತಿ ಶಾಲೆಗಳ ಪರೀಕ್ಷಾ ಕೇಂದ್ರ ಪರೀಕ್ಷಾ ಕೇಂದ್ರ ಇಲ್ಲದೆ ದೂರದ ಊರುಗಳಿಗೆ ಆಲೆಯುವಂತಾದ ಮಕ್ಕಳು ಪರಿಸ್ಥಿತಿ ಇದೆ ಇತ್ತಾ ತಾಲ್ಲೂಕ ಕೇಂದ್ರದಲ್ಲಿ ಪರೀಕ್ಷೆ ಕೇಂದ್ರವನ್ನು ಸ್ಥಾಪಿಸಲು ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರ
ಒತ್ತಾಯ ಕೇಳಿ ಬರುತ್ತದೆ.
ಹೌದು ಮಸ್ಕಿ ತಾಲ್ಲೂಕು ಕೇಂದ್ರ ವಾಗಿನಿಂದ ಇಲ್ಲಿ ಯವರಿಗೆ ಮೂರಾರ್ಜಿ ದೇಸಾಯಿ ,ಕಿತ್ತೂರು ರಾಣಿ ಚನ್ನಮ್ಮ,ಏಕಲವ್ಯ,ಡಾ ಬಿ.ಆರ್. ಅಂಬೇಡ್ಕರ್ ಶಾಲೆ ಗಳಪ್ರವೇಶ ಪರೀಕ್ಷೆ ಕೇಂದ್ರ ಮಸ್ಕಿ ಯಲ್ಲಿ ಇಲ್ಲ ರಾಜ್ಯ ಸರ್ಕಾರದ ಅಂಗಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಮೂರಾರ್ಜಿ ದೇಸಾಯಿ,ಕಿತ್ತೂರು ರಾಣಿ ಚನ್ನಮ್ಮ,ಏಕಲವ್ಯ ,ಡಾ.ಬಿ.ಆರ್ ಅಂಬೇಡ್ಕರ್ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳಿಗೆ ವಿದ್ಯಾರ್ಥಿಗಳ ಆಯ್ಕೆ ಗಾಗಿ ಕರ್ನಾಟಕ ಪರೀಕ್ಷೆ ಪ್ರಾಧಿಕಾರ ವತಿಯಿಂದ ೫ ನೇ ತರಗತಿಯ ಮಕ್ಕಳಗೆ ಪ್ರವೇಶ ಪರೀಕ್ಷೆ ಯು ಮಾರ್ಚ ತಿಂಗಳಲ್ಲಿ ನೆಡೆಯುತ್ತಿದ್ದು ಆದರೇ ಮಸ್ಕಿ ತಾಲ್ಲೂಕಿನ ಮಕ್ಕಳು ಮತ್ತು ಪೋಷಕರು ಮಾತ್ರ ಇನ್ನು ಹಳೆಯ ತಾಲ್ಲೂಕು ಕೇಂದ್ರಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುವುದು ತಪ್ಪಿಲ್ಲ್. ಚಿಕ್ಕ ಮಕ್ಕಳು ಅದರಲ್ಲಿಯೂ ಹಿಂದುಳಿದ ಪರಿಶಿಷ್ಟ ಜಾತಿ ಪಂಗಂಡದ ವರ್ಗದ ಮಕ್ಕಳೇ ಹೆಚ್ಚಾಗಿ ಇಂಥಹ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ ಆದರೇ ಪಯಣ ಮತ್ತು ಪಯಣದ ಖರ್ಚು ವೆಚ್ಚದ ಹೊರೆಯಿಂದ ಅವರು ಪ್ರತಿಷ್ಟಿತ ಶಾಲೆಯ ಪ್ರವೇಶ ದಿಂದ ದೂರವೇ ಉಳಿಯುವಂತಾಗಿದೆ.
ಮಸ್ಕಿ ತಾಲ್ಲೂಕು ಕೇಂದ್ರವಾದರೂ ಸಹ ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಮಸ್ಕಿ ಕೇಂದ್ರದಲ್ಲಿ ವಸತಿ ಶಾಲೆ ಯ ಪರೀಕ್ಷೆ ಕೇಂದ್ರ ಪ್ರಾರಂಭ ಮಾಡದಿರುವುದು ಅದರಲ್ಲೂ ಹಿಂದುಳಿದ ಬಡವರ ಮಕ್ಕಳು ಹೆಚ್ಚಾಗಿ ಇರುವ ಮತ್ತು ಮೀಸಲು ವಿಧಾನ ಸಭಾ ಕ್ಷತ್ರವಾದರೂ ಸಹ ಇಂದಿಗೂ ಹಳೇಯ ತಾಲೂಕಿನ ಕೇಂದ್ರದಲ್ಲಿ ಪ್ರವೇಶ ಪರೀಕ್ಷೆ ನೆಡುಸುತ್ತಿರುವುದು ಮಸ್ಕಿ ತಾಲ್ಲೂಕಿನ ಬಗ್ಗೆ ಅಧಿಕಾರಿ ವರ್ಗ ಆಡಳಿತ ವರ್ಗ ಹೊಂದಿರಿವ ತಾತ್ಸರ ಮತ್ತು ನಿರ್ಲಕ್ಷ್ಯ ಜಡ್ಡುಗಟ್ಟಿದ ಆಡಳಿತದ ವೈಫಲ್ಯ ಕ್ಕೆ ಹಿಡಿದ ಕೈ ಗನ್ನಡಿಯಾಗಿದೆ ಇನ್ನಾದರು ಜನ ಪ್ರತಿನಿಧಿಗಳು ಅಧಿಕಾರಿಗಳು ಹಿಂದುಳಿದ ಪ್ರದೇಶದ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ನೆರವಾಗುವ ಇಂಥಹ ಶಿಕ್ಷಣ ಸಂಸ್ಥೆಗಳಲ್ಲಿ ಅತಿಹೆಚ್ಚು ಮಕ್ಕಳು ಪರೀಕ್ಷೆ ಬರೆಯಲು ನೆರವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಮಸ್ಕಿ ತಾಲೂಕು ಕೇಂದ್ರವಾಗಿ ಇನ್ನು ದಾಖಲಾತಿಗಳಲ್ಲಿ ನಮೂದಾಗಿಲ್ಲ ಅಂದರೆ ಉತ್ತರ ಪತ್ರಿಕೆ ಪ್ರಶ್ನೆ ಪತ್ರಿಕೆಗಳಲ್ಲಿ ಮಸ್ಕಿ ತಾಲೂಕಿನಿಂದ ನಮೂದಿಸಿದರೆ ದತ್ತಾಂಶವನ್ನು ಸ್ವೀಕರಿಸುವುದೇ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ ಒಂದು ಕಡೆ ತಾಲೂಕು ಎಂಬ ಹೆಗ್ಗಳಿಕೆ ಇನ್ನೊಂದು ಕಡೆ ಯಾವುದೇ ಕೆಲಸ ವಾಗುವುದಿಲ್ಲ ಎಂಬುವ ನೋವು ಜನರನ್ನು ಇನ್ನೂ ಅದೆಷ್ಟು ದಿನ ಕಾಡುತ್ತದೆಯೋ ಮಕ್ಕಳ ನಿರಂತರ ಶಿಕ್ಷಣ ವನ್ನು ಪಡೆಯಲು ಅನುವು ಮಾಡಿಕೊಡುತ್ತಾರೊ ಕಾದು ನೋಡಬೇಕುಬೇಕಿದೆ.
ಬಾಕ್ಸ್
ಪರೀಕ್ಷಾ ಕೇಂದ್ರಗಳ ಆಯ್ಕೆ
ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಕಳೆದ ಮೂರು ವರ್ಷಗಳ ಹಿಂದೆ ನೀಡಲಾಗಿದ್ದು ಅವರುಗಳೇ ಪರೀಕ್ಷಾ ಕೇಂದ್ರವನ್ನು ನಿರ್ಧರಿಸುತ್ತಾರೆ ಸ್ಥಳೀಯ ತಾಲೂಕ ಶಿಕ್ಷಣಾಧಿಕಾರಿಗಳ ಮಾಹಿತಿಯ ಮೇರೆಗೆ ಪರೀಕ್ಷಾ ಕೇಂದ್ರಗಳು ಎಲ್ಲೆಲ್ಲಿ ಆಗಬೇಕು ಎಂಬುದನ್ನು ನಿರ್ಧರಿಸಿ ವಸತಿ ಶಾಲೆಗಳ ಪರೀಕ್ಷಾ ಕೇಂದ್ರಗಳನ್ನು ನಿರ್ಧರಿಸುವವರಾಗಿರುತ್ತಾರೆ. ನಮ್ಮ ಇಲಾಖೆಯಿಂದ ಯಾವುದೇ ಹಸ್ತಕ್ಷೇಪ ಇರುವುದಿಲ್ಲ.
ಶ್ರೀಶೈಲ ಡಿಸಿಒ
ರಾಯಚೂರು

ಬಾಕ್ಸ್
ಮಸ್ಕಿ ಯಲ್ಲಿ ಪರೀಕ್ಷಾ ಕೇಂದ್ರ ವನ್ನು ಪ್ರಾರಂಭ ಮಾಡಬೇಕು
ಏಕೆಂದರೆ ಸಾಕಷ್ಟು ಜನರು ಹಳ್ಳಿಯ ಮಕ್ಕಳಿಗೆ ಅನುಕೂಲ ವಾಗುತ್ತದೆ
ರವಿಕುಮಾರ್ ಮಗುವಿನ ಪಾಲಕರು