ಪರಿಹಾರ ಮೊತ್ತ ಹೆಚ್ಚಿಸುವಂತೆ ಕಟ್ಟಡ ಕಾರ್ಮಿಕರ ಮನವಿ :

ಹಿರಿಯೂರು.ಮೇ.27- ಲಾಕ್ಡೌನ್ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಆರ್ಥಿಕವಾಗಿ ತುಂಬಾ ತೊಂದರೆಯಲ್ಲಿದ್ದೇವೆ ಈಗ ಸರ್ಕಾರವು 3000 ಪರಿಹಾರ ಘೋಷಿಸರುವುದು ತೀರಾ ಕಡಿಮೆಯಾಗಿದೆ 10000 ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಗ್ರೇಡ್ 2 ತಹಶೀಲ್ದಾರ್ ಚಂದ್ರ ಕುಮಾರ್ ರವರಿಗೆ ಹಿರಿಯೂರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಜಿ.ದಾದಾಪೀರ್ ಇವರ ನೇತೃತ್ವದಲ್ಲಿ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ಎಸ್.ತಿಮ್ಮಯ್ಯ,ಮಾರುತಿ ರಾವ್ ಜಾಧವ್, ಜಿಲಾನ್ ಪಾಷ, ಮಹಮ್ಮದ್ ಸೈಫುಲ್ಲ ಇದ್ದರು: