ಪರಿಹಾರ ಬಿಡುಗಡೆಗೆ ಆಗ್ರಹಿಸಿ ಮನವಿ


ಲಕ್ಷ್ಮೇಶ್ವರ,ಡಿ.1: ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿದ್ದು ತಾಲೂಕಿನ ಗೋನಾಳ ಗ್ರಾಮದ ರೈತರು, ಸಾರ್ವಜನಿಕರು ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ತಹಶೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರದಲ್ಲಿ ಕಳೆದ ಮೂರು ವರ್ಷಗಳಿಂದ ರೈತರು ಸತತವಾಗಿ ಬೆಳೆಹಾನಿ ಅನುಭವಿಸುತ್ತಿದ್ದರೂ ಸರ್ಕಾರ ಇದುವರೆಗೂ ರೈತರಿಗೆ ಬೆಳೆ ಹಾನಿ ಪರಿಹಾರ ಬೆಳೆ ವಿಮೆ ನೀಡದಿರುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ.
ರೈತರ ಖಾತೆಗಳಿಗೆ ಯಾವ ಕಾರಣಕ್ಕಾಗಿ ಹಣ ಜಮಾ ಆಗಿಲ್ಲ, ಆಗಿರುವ ತಾಂತ್ರಿಕ ದೋಷವೇನು ಅದನ್ನು ಸರಿಪಡಿಸುವ ಅಧಿಕಾರಿಗಳು ಯಾರು, ಏಕೆ ರೈತರನ್ನು ಕಡೆಗಣಿಸುತ್ತಿದ್ದೀರಿ ಎಂದು ಸರ್ಕಾರಕ್ಕೆ ಪ್ರಶ್ನಿಸಿರುವ ರೈತರು ಮನವಿಪತ್ರ ಮುಟ್ಟಿದ ಏಳು ದಿನಗೊಳಗಾಗಿ ಸಮರ್ಪಕ ಉತ್ತರ ನೀಡದಿದ್ದರೆ. ಗೋನಾಳ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುವುದು. ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಸರಕಾರವೇ ನೇರ ಹೊಣೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಭರಮಣ್ಣ ರೊಟ್ಟಿಗವಾಡ, ಶೇಕಣ್ಣ ಕಾಳೆ, ಫಕ್ಕಿರೇಶ್ ಮ್ಯಾಟಣ್ಣವರ ಚಂದ್ರು ತಳವಾರ್, ನಾಗರಾಜ್ ದೊಡ್ಡಮನಿ, ಶೇಖರಗೌಡ ಕೊರಡೂರ, ಅಲ್ಲಿಸಾಬ ಅಗಸಿಮನಿ, ದಿವಾಕರ್ ಬಡಿಗೇರ್ ಸೇರಿದಂತೆ ಅನೇಕ ರೈತರು ಇದ್ದರು.