ಪರಿಹಾರ ನೀಡಲು ಆಗ್ರಹಿಸಿ ಮಾ.೨೭ ಹೆದ್ದಾರಿ ಬಂದ್

ಕೋಲಾರ ಮಾ.೨೫: ಆಕಾಲಿಕ ಮುಂಗಾರು ಆಲಿಕಲ್ಲು ಬಿರುಗಾಳಿಗೆ ನಷ್ಟವಾಗಿರುವ ಬೆಳೆ ಸಮೀಕ್ಷ ಮಾಡಲು ವಿಶೇಷ ತಂಡ ರಚನೆ ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ ೨ ಲಕ್ಷ ಪರಿಹಾರ ನೀಡಬೇಕೆಂದು ಮಾ.೨೭ ರಂದು ನಷ್ಟ ಬೆಳೆ ಸಮೇತ ರಾಜ್ಯ ಹೆದ್ದಾರಿ ವಡ್ಡಹಳ್ಳಿ ಕ್ರಾಸ್ ಬಂದ್ ಮಾಡಲು ಮುಳಬಾಗಿಲು ಹೊರವಲಯz ಅರಣ್ಯ ಉದ್ಯಾನವನದಲ್ಲಿ ಸೇರಿದ್ದ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಲಕ್ಷಾಂತರ ಬಂಡವಾಳ ಹಾಕಿ ಬೆಳೆದಿದ್ದ ಸಾವಿರಾರು ಹೆಕ್ಟೆರ್ ವಾಣಿಜ್ಯ ಬೆಳೆ ಹಾಗೂ ಮಾವು ಪಸಲು ಅಕಾಲಿಕ ಮುಂಗಾರು ಮಳೆ ಆಲಿಕಲ್ಲು ಬಿರುಗಾಳಿಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿ ರೈತರ ಬದುಕು ಬೀದಿಗೆ ಬಿದ್ದಿದ್ದರೂ ರೈತ ಪರ ನಿಲ್ಲಬೇಕಾಗಿದ್ದ ಉಸ್ತುವಾರಿ ಹಾಗೂ ಸ್ಥಳಿಯ ಶಾಸಕರಾದ ನಾಗೇಶ್‌ರವರು ಬೆಂಗಳೂರಿಗೆ ಹೋಗಿದ್ದಾರೆಂದು ರೈತ ಸಂಘದ ತಾಲ್ಲುಕಾದ್ಯಕ್ಷ ಯಲುವಳ್ಳಿ ಪ್ರಭಾಕರ್ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯದ್ಯಕ್ಷ ಹೆಬ್ಬಣಿ ಆನಂದ್‌ರೆಡ್ಡಿ ಮಾತನಾಡಿ ಹದಗೆಟ್ಟಿರುವ ಕೃಷಿ ಕ್ಷೇತ್ರದಲ್ಲಿ ೧ ಎಕರೆ ಬೆಳೆ ಮಾಡಬೇಕಾದರೆ ಕನಿಷ್ಠಪಕ್ಷ ೨-೩ ಲಕ್ಷ ಖರ್ಚು ಬರುತ್ತದೆ ಆದರೂ ಭೂಮಿಯನ್ನು ನಂಬಿ ಬಿತ್ತನೆ ಮಾಡಿರುವ ಬೆಳೆ ಬರಲು ೩ ತಿಂಗಳು ಕಾಯಲೇಬೇಕು ಅದರ ಮದ್ಯದಲ್ಲಿ ಏಕಾ ಏಕಿ ಸಾಂಕ್ರಾಮಿಕ ರೋಗಗಳು, ಮುಂಗಾರು ಮಳೆ ಆರ್ಭಟಕ್ಕೆ ಕೈಗೆ ಬಂದ ಬೆಳೆ ಮಾರುಕಟ್ಟೆಗೆ ಬರುವ ಸಮಯದಲ್ಲಿ ಸಂಪೂರ್ಣವಾಗಿ ಪ್ರಕೃತಿ ವಿಕೋಪಗಳಿಗೆ ತುತ್ತಾಗಿ ೩ ತಿಂಗಳ ರೈತರ ಬೆವರ ಹನಿ ಒಂದೇ ಗಂಟೆಯಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ರೈತರ ರಕ್ಷಣೆಗೆ ಜನಪ್ರತಿನಿದಿಗಳು ಆಧಿಕಾರಿಗಳು ಇದ್ದೂ ಇಲ್ಲದಂತಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಕಷ್ಟಕ್ಕೆ ಸ್ಪಂದಿಸದೆ ನಾಪತ್ತೆ ಆಗಿರುವ ಉಸ್ತುವಾರಿ ಸಚಿವರು ಹಾಗೂ ಸ್ಥಳಿಯ ಶಾಸಕರನ್ನು ಹುಡುಕಿಕೊಟ್ಟು ಬೆಳೆ ನಷ್ಟ ಸಮೀಕ್ಷೆ ಮಾಡಲು ವಿಶೇಷ ತಂಡ ರಚನೆ ಮಾಡಿ ಪ್ರತಿ ಎಕರೆಗೆ ೨ ಲಕ್ಷ ಪರಿಹಾರ ನೀಡಲು ಸರ್ಕಾರವನ್ನು ಒತ್ತಾಯಿಸಿದರು.
ಮಾ. ೨೭ ರ ಸೋಮವಾರ ನಷ್ಟ ಬೆಳೆ ಸಮೇತ ರಾಜ್ಯ ಹೆದ್ದಾರಿ ವಡ್ಡಹಳ್ಳಿ ಕ್ರಾಸ್ ಬಂದ್ ಮಾಡಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ನೊಂದ ರೈತರಿಗೆ ಬೆಂಬಲ ನೀಡಬೇಕೆಂದು ಕೋರಿದರು.
ಸಭೆಯಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್ ಪಾಷ, ಬಂಗಾರಿ ಮಂಜು, ರಾಜೇಶ್, ಸುನಿಲ್, ಭಾಸ್ಕರ್, ವಿಜಯ್‌ಪಾಲ್, ಜುಬೇರ್‌ಪಾಷ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಪದ್ಮಘಟ್ಟ ಧಮ್, ನಂಗಲಿ ನಾಗೇಶ್, ರಾಮು ಮೂರ್ತಿ ಗೀರೀಶ್, ವೇಣು ಕೇಶವ, ಮಂಗಸಂದ್ರ ತಿಮ್ಮಣ್ಣ, ಸಂದೀಪ್‌ರೆಡ್ಡಿ, ಸಂದೀಪ್‌ಗೌಡ, ರಾಮಸಾಗರ ವೇಣು, ಮಾಸ್ತಿ ವೆಂಕಟೇಶ್, ಯಲ್ಲಪ್ಪ, ಹರೀಶ್ ಮುಂತಾದವರಿದ್ದರು.