ಪರಿಹಾರ ನೀಡಲು ಆಗ್ರಹಿಸಿ ಕರವೇ ಪ್ರತಿಭಟನೆ

ಧಾರವಾಡ ಮಾ.26: ವರ್ಷ 2019-2020 ರಲ್ಲಿ ಸುರಿದ ಅತಿವೃಷ್ಟಿ ಮಳೆಯಿಂದ ಮನೆ ಕಳೆದುಕೊಂಡ ನವಲಗುಂದ ಅಳ್ನಾವರ ಮತ್ತು ಧಾರವಾಡ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ಹಾಗೂ ಧನ ಪರಿಹಾರ ಸಿಗದಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಧಾರವಾಡ ಜಿಲ್ಲಾ ಅಧ್ಯಕ್ಷ ರುದ್ರೇಶ್ ಹಳವದ ಹಾಗೂ ರೈತರ ಅಧ್ಯಕ್ಷರಾದ ಪಾಪು ಧಾರೆ ಅವರ ಮುಖಂಡತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅತಿವೃಷ್ಟಿ ಮಳೆಯಿಂದ ನಿಜವಾಗಿಯೂ ಮನೆ ಕಳೆದುಕೊಂಡವರ ಸಂಖ್ಯೆ ಸಾಕಷ್ಟಿದೆ.
ಆದರೆ ಒಂದು ಕಡೆ ನಿಷ್ಪಕ್ಷಪಾತವಾಗಿ ಸರ್ವೆ ಮಾಡುವ ಮೂಲಕ ಸರಕಾರದ ಪರಿಹಾರ ನೀಡುವ ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡದೆ ಕರ್ತವ್ಯಲೋಪ ಎಸಗಿದ್ದಾರೆ. ಹಾಗೂ ಸರಕಾರ ಅತಿವೃಷ್ಟಿ ಇಂದ ಮನೆ ಕಳೆದುಕೊಂಡಂತಹ ಕುಟುಂಬದವರು ಯಾವ ರೀತಿ ಅರ್ಜಿಯನ್ನು ಹಾಕಬೇಕು ಮತ್ತು ಯಾರನ್ನು ಸಂಪರ್ಕಿಸುವ ಮೂಲಕ ಆದಂತಹ ನಷ್ಟದ ಪ್ರಮಾಣವನ್ನು ದಾಖಲಿಸಬೇಕು ಎಂಬುದನ್ನು ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸದೆ ಇರುವುದು ಸಹ ಇದಕ್ಕೆ ಕಾರಣವಾಗಿತ್ತು. ಈ ಕಾರಣದಿಂದಾಗಿ ಸಾಕಷ್ಟು ಬಡ ಕುಟುಂಬಗಳು ಸರ್ಕಾರದಿಂದ ದೊರಕಬೇಕಾದ ಸೌಲಭ್ಯಗಳಿಂದ ವಂಚಿತರಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ವಿಚಾರವಾಗಿ ಧಾರವಾಡದ ಗ್ರಾಮೀಣ ಶಾಸಕರಾದ ಅಮೃತ ದೇಸಾಯಿಯವರು ಸಂಬಂಧಪಟ್ಟಂತಹ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಕಾರಣ ಈ ಕೂಡಲೇ ಜಿಲ್ಲಾಧಿಕಾರಿಗಳು ಆಯಾ ತಾಲೂಕಿನ ದಂಡಾಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಮತ್ತೊಮ್ಮೆ ನಿಷ್ಪಕ್ಷಪಾತ ತನಿಖೆ ಮಾಡುವುದರ ಮೂಲಕ ಸೂಕ್ತ ನಿರ್ದೇಶನ ನೀಡಿ, ನಿಜವಾದ ಫಲಾನುಭವಿಗಳಿಗೆ ಸರಕಾರದ ಸೌಲಭ್ಯ ಮತ್ತು ಧನಸಹಾಯ ನೀಡುವಂತೆ ಆದೇಶಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿತು.
ಈ ಹೋರಾಟದಲ್ಲಿ ರಾಜ್ಯ ರೈತ ಘಟಕದ ಸಂಘಟನಾ ಕಾರ್ಯದರ್ಶಿಗಳಾದ ರಹಮಾನ್ ಹೊಳೆ, ಜಿಲ್ಲಾ ಅಧ್ಯಕ್ಷರಾದ ರುದ್ರೇಶ್ ಹಳವದ, ರೈತ ಘಟಕದ ಜಿಲ್ಲಾಧ್ಯಕ್ಷರಾದ ಪಾಪು ಧಾರೆ, ಶಿವಸೋಮಣ್ಣ ನಿಟ್ಟೂರು, ಪ್ರಭು ಕುಂಬಾರ ರವಿಕುಮಾರ್ ಕೊಲ್ಕರ್, ಪ್ರಭುಗೌಡ, ಸಚಿನ, ಅಸ್ಪಕ್ ಮುಲ್ಲಾ, ಮಲಿಕ್ ರಿಯಾಜ್ ಅಸ್ಪಕ್ ಹಂಗರಕಿ, ಸೇರಿದಂತೆ ಐವತ್ತಕ್ಕೂ ಹೆಚ್ಚು ಜನ ಭಾಗವಹಿಸಿದ್ದರು