ಪರಿಹಾರ ಧನ ಪಡೆಯಲು ಅಗತ್ಯ ದಾಖಲೆ ತ್ವರಿತ ಸಲ್ಲಿಸಿ:ಡಿಸಿ ಸೂಚನೆ

ವಿಜಯಪುರ,ಮೇ.25:2023ನೇ ಸಾಲಿನ ಮುಂಗಾರು ಬೆಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರಧನವು ರಾಜ್ಯದಲ್ಲಿಯೇ ವಿಜಯಪುರ ಜಿಲ್ಲೆಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಒಟ್ಟು ರೂ. 41,348.76 ಲಕ್ಷ ಮೊತ್ತವು ಜಿಲ್ಲೆಯ ಒಟ್ಟು 2,50,063 ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಿದೆ. ಆದಾಗ್ಯೂ ಕೂಡ ಜಿಲ್ಲೆಯ ಒಟ್ಟು 18,727 ಫಲಾನುಭವಿಗಳಿಗೆ ವಿವಿಧ ಕಾರಣಗಳಿಂದಾಗಿ ಪರಿಹಾರಧನವು ಜಮೆಯಾಗಿಲ್ಲ.(ಉದಾ:Aadhar Name is Mismatch in Fruits Update Name, Aadhar Not Seeded with Bank, Aadhar is not Seeded with Bank, etc) ಆ ಪೈಕಿ ಒಟ್ಟು 15,459 ಫಲಾನುಭವಿಗಳಿಂದ ಅವಶ್ಯಕ ದಾಖಲೆಗಳನ್ನು ಪಡೆದು, ಮಾಹಿತಿಯನ್ನು ಸರಿಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.
ಇದಲ್ಲದೇ ಸ್ಥಳಾಂತರ/ವಲಸೆ/ಬೇರೆ ಗ್ರಾಮ/ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವಂತಹ ಫಲಾನುಭವಿಗಳ ದಾಖಲೆಗಳನ್ನು ಪಡೆದು ಸರಿಪಡಿಸಲು ಆಗದಿರುವುದರಿಂದ ಅಂಥಹ ಫಲಾನುಭವಿಗಳಿಗೆ ಬೆಳೆಹಾನಿಯ ಪರಿಹಾರಧನವನ್ನು ಜಮೆ ಮಾಡಲು ಆಗುತ್ತಿರುವುದಿಲ್ಲ. ಅಂಥಹ ಫಲಾನುಭವಿಗಳ ಪಟ್ಟಿಯನ್ನು ಆಯಾ ತಾಲೂಕಿನ ತಹಶೀಲದಾರ ಕಚೇರಿ, ಗ್ರಾಮ ಪಂಚಾಯತಿ,ಗ್ರಾಮ ಚಾವಡಿಗಳಲ್ಲಿ ಪ್ರದರ್ಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳಾಂತರ, ವಲಸೆ, ಬೇರೆ ಗ್ರಾಮ, ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವಂತಹ ಫಲಾನುಭವಿಗಳು ಕೂಡಲೇ ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳವರಿಗೆ 3 ದಿನಗಳಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಬೆಳೆಹಾನಿಗೆ ಪರಿಹಾರ ಧನ ಜಮೆ ಮಾಡುವ ಕುರಿತು ಜಿಲ್ಲಾಡಳಿತದೊಂದಿಗೆ ಸಹಕರಿಸಲು ಕೋರಿದ್ದಾರೆ. ಇಂಥಹ ಫಲಾನುಭವಿಗಳ ಸಂಬಂಧಿಕರು ಸಹ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಫಲಾನುಭವಿಗಳಿಗೆ ಸೂಚಿಸಿದ್ದಾರೆ. ಇಲ್ಲದಿದ್ದಲ್ಲಿ ಬೆಳೆ ಹಾನಿಯ ಪರಿಹಾರ ಜಮೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ತಾಲೂಕಾವಾರು ಪ್ರಕರಣಗಳ ವಿವರ ವಿಜಯಪುರ-85, ತಿಕೋಟಾ-72, ಬಬಲೇಶ್ವರ-123, ಬಸವನ ಬಾಗೇವಾಡಿ-182, ನಿಡಗುಂದಿ-62, ಕೊಲ್ಹಾರ, ಮುದ್ದೇಬಿಹಾಳ-166, ತಾಳಿಕೋಟೆ, ಇಂಡಿ-90, ಚಡಚಣ-139, ಸಿಂದಗಿ-78, ದೇವರ ಹಿಪ್ಪರಗಿ-15, ಆಲಮೇಲ-105 ಹೀಗೆ ಒಟ್ಟು 1336 ಇವೆ ಎಂದು ಹೇಳಿದ್ದಾರೆ.