ಪರಿಹಾರ ಧನ ಚೆಕ್ ವಿತರಣೆ

ಮುಂಡಗೋಡ, ಆ2 : ಇತ್ತಿಚೆಗೆ ಮುಂಡಗೋಡ ಪಟ್ಟಣದ ಹಳೂರ ಓಣಿಯಲ್ಲಿ ವಿದ್ಯುತ್ ಅವಘಡದಿಂದ ಕೊಟ್ಟಿಗೆಗೆ ಬೆಂಕಿತಗುಲಿ 7 ಹಸುಗಳು ಸಜೀವ ದಹನಗೊಂಡ ಘಟನೆ ಸಂಭವಿಸಿತ್ತು.
ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಸಂತ್ರಸ್ತರಾದ ಮಂಜುನಾಥ ನಾಗೇಶ ಶೆಟ್ ಅವರ ನಿವಾಸಕ್ಕೆ ಭೇಟಿ ನೀಡಿ ಕೆ.ಡಿ.ಸಿ.ಸಿ ಬ್ಯಾಂಕ್ ನ ರೈತ ಕಲ್ಯಾಣ ನಿಧಿಯಿಂದ 1 ಲಕ್ಷ ರೂಪಾಯಿಗಳ ಪರಿಹಾರ ಧನದ ಚೆಕ್ ಅನ್ನು ಹಸ್ತಾಂತರಿಸಿದರು.