ಪರಿಹಾರ ಚೆಕ್ ವಿತರಣೆ


ಮುಂಡಗೋಡ,ಎ.19: ಕಳೆದ ವಾರ ಸಿಡಿಲು ಬಡಿದು 18 (ಮೇಕೆ)ಕುರಿಗಳನ್ನು ಕಳೆದುಕೊಂಡ ತಾಲೂಕಿನ ಕಾತೂರ ಗ್ರಾ.ಪಂ ವ್ಯಾಪ್ತಿಯ ಹುಲಿಹೊಂಡ ಗ್ರಾಮದ ನಾಗು ಶಳಕೆ ಅವರ ಮನೆಗೆ ಬಾನುವಾರ ಸಂಜೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಬೇಟಿ ನೀಡಿ ಜಿಲ್ಲಾ ಮಧ್ಯವರ್ತಿ(ಕೆ.ಡಿ.ಸಿ.ಸಿ) ಬ್ಯಾಂಕ್ ವತಿಯಿಂದ ಕುರಿ ಮಾಲೀಕರಿಗೆ ತಲಾ 5 ಸಾವಿರದಂತೆ 18 ಕುರಿಗಳಿಗೆ 90 ಸಾವಿರ ರೂಪಾಯಿ ಪರಿಹಾರ ಚೆಕ್ ವಿತರಿಸಿದರು.
ಜಿ.ಪಂ ಸದಸ್ಯ ರವಿಗೌಡ ಪಾಟೀಲ, ಫಕ್ಕೀರಸ್ವಾಮಿ ಗುಲ್ಯಾನವರ, ಸಂಜು ಕೀರ್ತೆಪ್ಪನವರ, ಪರಶುರಾಮ ತಹಸೀಲ್ದಾರ, ಚಂದ್ರಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.