ಪರಿಹಾರ ಒದಗಿಸಲು ರೈತ ಸಂಘ ಒತ್ತಾಯ

ರಾಯಚೂರು, ಆ.೫, ತೆಲಂಗಾಣ ಜಿಲ್ಲೆಗೆ ಸಂಬಂಧಿಸಿದ ಜುರಾಲ ಹಿನ್ನಿರಿನಲ್ಲಿ ಮುಳುಗಡೆಯಾದ ತಾಲೂಕಿನ ಬುರದಿಪಾಡ ಗ್ರಾಮದ ದರ್ಮರೆಡ್ಡಿ ತಂದೆ ವೆಂಕಟರೆಡ್ಡಿ ಇವರು ಅನೇಕ ವರ್ಷಗಳಿಂದ ಹಳೆ ಊರನ್ನು ಮುಳಗಡೆಯಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಬಂದು ಬಿಡಿಸಿದರು. ಕೆಲ ಜನರನ್ನು ಈ ಜಾಗದಿಂದ ಬಿಡಿಸಿ ಅಂದಿನ ಸರಕಾರ ಈ ಜನರಿಗೆ ಸರಕಾರದಿಂದ ಮೂಲ ಸೌಕರ್ಯಗಳು ಒದಗಿಸಿದ್ದಾರೆ. ಇನ್ನೂಳಿದ ಜನರಿಗೆ ಯಾವುದೇ ಮೂಲ ಸೌಕರ್ಯಗಳು ಸಿಗದೇ ವಂಚಿತರಾಗಿ ಜಿಲ್ಲಾಡಳಿತಕ್ಕೆ ಅನೇಕ ಭಾರಿ ಮನವಿ ಸಲ್ಲಿಸಿದರು ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು. ಜಿಲ್ಲಾಧಿಕಾರಿಗಳು ಶೀಘ್ರದಲ್ಲಿ ವಿಚಾರಣೆ ಮಾಡಿ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ರೈತ ಸಂಘ ಹಾಗೂ ಗ್ರಾಮಸ್ಥರಿಂದ ಕಾರ್ಯಾಲಯದ ಮುಂದೆ ಉಗ್ರ ಹೋರಾಟದ ಮೂಲಕ ಸತ್ಯಗ್ರಹವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಮನವಿಗೆ ಸ್ಪಂದನೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳೇ ಹೊಣೆಯಾಗಿರುತ್ತಾರೆ ಎಂದರು.
ಈ ಸಂದರ್ಭದಲ್ಲಿ ನರಸರೆಡ್ಡಿ, ಜನಾರ್ಧನ ಗೌಡ, ಸೇರಿದಂತೆ ಉಪಸ್ಥಿತರಿದ್ದರು.