ಪರಿಹಾರದ ನಿರೀಕ್ಷೆಯಲ್ಲಿ ಅನುದಾನರಹಿತ ಶಿಕ್ಷಕರು

ಲಕ್ಷ್ಮೇಶ್ವರ, ಜೂ7 : ಸತತ ಎರಡನೆಯ ಶೈಕ್ಷಣಿಕ ವರ್ಷವೂ ಕೊರೋನಾದಿಂದಾಗಿ ಡೋಲಾಯಮಾನವಾಗಿದ್ದ ಅನುದಾನರಹಿತ ಶಾಲೆಗಳಲ್ಲಿ ಸೇವೆಸಲ್ಲಿಸುತ್ತಿರುವ ಶಿಕ್ಷಕರ ಸ್ಥಿತಿ ಗಂಭೀರವಾಗಿದ್ದು, ಅವರು ಸರ್ಕಾರದ ಪರಿಹಾರದ ನಿರೀಕ್ಷೆಯಲ್ಲಿದ್ದರು. ಈಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಎರಡನೆಯ ಪ್ಯಾಕೇಜಿನಲ್ಲಿ ಅನುದಾನರಹಿತ ಶಾಲೆಯ ಶಿಕ್ಷಕರು 5000 ರೂ. ಪರಿಹಾರ ಘೋಷಿಸಿರುವುದು ಸ್ವಲ್ಪಮಟ್ಟಿಗೆ ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.
ತಾಲೂಕಿನಲ್ಲಿ 10 ಅನುದಾನರಹಿತ ಶಾಲೆಗಳಿದ್ದು ಅದರಲ್ಲಿ ಒಂದು ಪಿಯು ಕಾಲೇಜು, ಒಂದು ಐಟಿಐ ಕಾಲೇಜು ಸೇರಿ ಒಟ್ಟು ಎರಡು ಕಾಲೇಜಿನ 153 ಶಿಕ್ಷಕರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ ಯಾವುದೇ ಓರೆಕೋರೆಗಳನ್ನು ಒಡ್ಡದೆ ಸಂಕಷ್ಟದಲ್ಲಿರುವ ಶಿಕ್ಷಕ ಸಮುದಾಯದ ನೆರವಿಗೆ ಧಾವಿಸಬೇಕಾಗಿದೆ.
ತಾಲೂಕಿನ ಶಿಗ್ಲಿ ಗ್ರಾಮದ ಎಸ್ ಎಸ್ ಕೂಡ್ಲಮಠ ಶಾಲೆಯ 12 ಶಿಕ್ಷಕರು, ಎಸ್ ಎ ಹುಲಗೂರ ಶಾಲೆಯ 15 ಶಿಕ್ಷಕರು, ಅಡರಕಟ್ಟಿಯ ಜಗದ್ಗುರು ವೀರಸೋಮೇಶ್ವರ ಪ್ರೌಢಶಾಲೆಯ 10 ಶಿಕ್ಷಕರು, ಪಿ.ಎಸ್. ಬಿಡಿಯ ಆಂಗ್ಲ ಮಾಧ್ಯಮ ಶಾಲೆಯ 20 ಶಿಕ್ಷಕರು, ಬಿ.ಸಿ.ಎನ್ ಕನ್ನಡ ಮತ್ತು ಆಂಗ್ಲ ಮಾಧ್ಯಮದ 35 ಶಿಕ್ಷಕರು, ನವಚೇತನ ಶಾಲೆಯ 15 ಶಿಕ್ಷಕರು, ದಿ ಉನಿಕ್ ಪ್ರೌಢಶಾಲೆಯ 22 ಶಾಲೆಯ, ಸವೆನ್ ಪ್ರೌಢಶಾಲೆಯ 15, ಲಿಟಲ್ ಹಾರ್ಟಿನ 30, ಆಕ್ಸ್ ಫೆÇೀರ್ಡ್ ಪ್ರೌಢಶಾಲೆಯ 15, ಬಿ.ಸಿ.ಎನ್ ಪಿಯು ಮತ್ತು ಪಾಲಿಟೆಕ್ನಿಕ್ 25, ಬಾಬುಜಿ ಐಟಿಐ ಕಾಲೇಜಿನ 8 ಸೇರಿದಂತೆ 253 ಶಿಕ್ಷಕರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.