ಪರಿಹಾರದ ಚೆಕ್ ವಿತರಣೆ


ಲಕ್ಷ್ಮೇಶ್ವರ, ಫೆ 4: ತಾಲೂಕಿನ ಸುರಣಿಗಿ ಗ್ರಾಮದಲ್ಲಿ ಜ. 7ರಂದು ನಟ ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೃಹತ್ ಕಟೌಟ್ ನಿಲ್ಲಿಸುವ ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಸಾವಿಗೀಡಾದ ಘಟನೆ ಸಂಭವಿಸಿ ಮೂವರು ತೀವ್ರವಾಗಿ ಗಾಯಗೊಂಡಿದ್ದರು.
ಗಾಯಗೊಂಡು ಗದಗ ಮತ್ತು ಹುಬ್ಬಳ್ಳಿ ಕೆಎಂಸಿಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಮಂಜುನಾಥ್ ಸಿದ್ದಪ್ಪ ಹರಿಜನ, ಹನುಮಂತಪ್ಪ ಗಾಳಪ್ಪ ಹರಿಜನ, ಪ್ರಶಾಂತ್ ಮ್ಯಾಗೇರಿ ಇವರುಗಳಿಗೆ ಶನಿವಾರ ಯಶೋಮಾರ್ಗ ಫೌಂಡೇಶನ್ ವತಿಯಿಂದ ಬಳಗದ ಸದಸ್ಯರು ಗಾಯಾಳುಗಳಿಗೆ ತಲಾ ಒಂದು ಲಕ್ಷ ರೂ.ಗಳ ಪರಿಹಾರ ಧನದ ಚೆಕ್ಕನ್ನು ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಇದ್ದರು.