ಪರಿಹಾರಕ್ಕೆ ಒತ್ತಾಯಿಸಿ ರೈತರು ಆತ್ಮಹತ್ಯೆಗೆ ಯತ್ನ- ಆಸ್ಪತ್ರೆಗೆ ಶಾಸಕರ ಭೇಟಿ

ಕೋಲಾರ,ಆ,೮-ಜಿಲ್ಲೆಯಲ್ಲಿ ಹಾದುಹೋಗುವ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ವೇ ಕಾರಿಡಾರ್‌ಗೆ ಹೆದ್ದಾರಿ ಪ್ರಾಧಿಕಾರವು ಜಮೀನು ವಶಪಡಿಸಿಕೊಂಡು ರೈತರಿಗೆ ಪರಿಹಾರ ನೀಡಿಲ್ಲವೆಂದು ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ರೈತರನ್ನು ಭಾನುವಾರ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ಸಿ ಅನಿಲ್ ಕುಮಾರ್ ಭೇಟಿ ಮಾಡಿದರು.
ನಗರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಮಾತನಾಡಿ, ಶಾಸಕ ಕೊತ್ತೂರು ಮಂಜುನಾಥ್ ರೈತರು ರಸ್ತೆಗೆ ಜಮೀನು ನೀಡಿದಂತೆ ರೈತರಿಗೆ ಪರಿಹಾರ ನೀಡುವುದು ಕೂಡ ಸರಕಾರದ ಜವಾಬ್ದಾರಿಯಾಗಿದೆ, ಯಾವುದೇ ಕಾರಣಕ್ಕೂ ನಿಮಗೆ ಮೋಸವಾಗುವುದಿಲ್ಲ ನ್ಯಾಯ ಕೊಡಿಸುತ್ತೇವೆ ವಿಷ ಕುಡಿದ ಮಾತ್ರಕ್ಕೆ ನಿಮಗೆ ಪರಿಹಾರ ಸಿಗುವುದಿಲ್ಲ, ಕೋರ್ಟ್ ಕಛೇರಿ ಇದೆ ಕೂಡಲೇ ಸಂಬಂಧಿಸಿದ ಅಧಿಕಾರಗಳ ಗಮನಕ್ಕೆ ತಂದು ನಿಮಗೆ ಪರಿಹಾರ ನೀಡಲಾಗುತ್ತದೆ ಧೈರ್ಯದಿಂದ ಇರುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ರಸ್ತೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರಕ್ಕಾಗಿ ಸರಕಾರದ ವತಿಯಿಂದ ವಕೀಲರನ್ನು ನೇಮಕ ಮಾಡಿ ಕೋರ್ಟ್ ಮೂಲಕವೇ ಪರಿಹಾರ ನೀಡಲಾಗುತ್ತದೆ ಶುಕ್ರವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶಾಸಕರು ಪಿಡಬ್ಲೂ ಅಧಿಕಾರಿಗಳ ಸಭೆ ಕರೆಯಲಾಗಿದ್ದು ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಸಂಬಂಧಿಸಿದವರ ಗಮನಕ್ಕೆ ತರಲಾಗುತ್ತದೆ ಎಂದು ಭರವಸೆ ನೀಡಿದರು.
ರೈತರು ಇದ್ದರೆ ಮಾತ್ರ ಈ ಭೂಮಿಯಲ್ಲಿ ನಾವು ನೀವು ಎಲ್ಲರೂ ಬದುಕಲು ಸಾಧ್ಯ ರೈತರ ಸಮಸ್ಯೆಗಳಿಗೆ ಸಮಾಧಾನದಿಂದ ಉತ್ತರ ಕೊಡಿ ದೌರ್ಜನ್ಯ ದಬ್ಬಾಳಿಕೆಯ ಮೂಲಕ ಭೂಮಿ ವಶಪಡಿಸಿಕೊಳ್ಳಬೇಡಿ ವಾಸ್ತವಾಂಶವನ್ನು ರೈತರಿಗೆ ತಿಳಿ ಹೇಳಬೇಕು ಎಂದು ತಹಸೀಲ್ದಾರ್‌ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೈತ ನಮ್ಮಲ್ಲಿ ಇದ್ದ ಜಮೀನನ್ನು ರಸ್ತೆ ಮಾಡಲಿಕ್ಕೆ ವಶಪಡಿಸಿಕೊಂಡಿದ್ದಾರೆ ಜಮೀನಿಗೆ ಪರಿಹಾರ ಕೂಡ ನೀಡಿಲ್ಲ ಎಂದರು ಅ ಸಂದರ್ಭದಲ್ಲಿ ಕೊತ್ತೂರು ಮಂಜುನಾಥ್ ಮಾತನಾಡಿ ಜಮೀನು ಇಲ್ಲ ಎಂದು ತಹಶಿಲ್ದಾರ್ ಅವರಿಗೆ ಅರ್ಜಿ ಕೊಡಿ ದರಖಾಸ್ತು ಸಮಿತಿ ಅಧ್ಯಕ್ಷನಾಗಿ ನಾನೇ ಇರತ್ತೇನೆ ಜಮೀನು ಕೊಡಿಸುವ ಭರವಸೆ ನೀಡಿದರು
ಎಂಎಲ್ಸಿ ಅನಿಲ್ ಕುಮಾರ್ ಮಾತನಾಡಿ ಸುಸೈಡ್ ಎಲ್ಲದಕ್ಕೂ ಪರಿಹಾರವಲ್ಲ ಬದುಕಿದ್ದಾಗ ಮಾತ್ರವೇ ನಾವು ಏನಾದರೂ ಮಾಡಲು ಸಾಧ್ಯ ಸರಕಾರ ವಶಪಡಿಸಿಕೊಂಡ ಯಾವುದೇ ಜಮೀನು ಇದ್ದರೂ ಪರಿಹಾರ ನೀಡುತ್ತದೆ ಸ್ವಲ್ಪ ದಿನ ವಿಳಂಬವಾಗಬಹುದು ಅಷ್ಟೇ ನಾವು ತಾಳ್ಮೆ ಕಳೆದುಕೊಳ್ಳಬಾರದು ಎಂದರು
ಈ ಸಂದರ್ಭದಲ್ಲಿ ತಹಶಿಲ್ದಾರ್ ಹರ್ಷವರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವಿಜಯಕುಮಾರ್, ನಗರಸಭೆ ಸದಸ್ಯ ಮುರಳಿಗೌಡ ಮುಖಂಡರಾದ ಜನಪನಹಳ್ಳಿ ನವೀನ್, ಶರಣ್ ಮುಂತಾದವರು ಇದ್ದರು.