ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಧಾರವಾಡ ಮೇ.4–ನಗರದ ಪರಿಶಿಷ್ಟ ಜಾತಿ ಸಮುದಾಯದ ಚರ್ಮಗಾರಿಕೆ ಯಲ್ಲಿ ತೊಡಗಿರುವ ಫಲಾನುಭವಿಗಳಿಗೆ ಆಹಾರಧಾನ್ಯಗಳ ಕಿಟ್ಟು ಹಾಗೂ ಸಹಾಯಧನ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈಹಿಂದೆ 1 ನೇ ಅಲೆ ಕೋವಿಡ್ 19ರ ಸಂಬಂಧಿಸಿದಂತೆ ಸರ್ಕಾರವು ಲಾಕ್ ಡೌನ್ ಮಾಡಿದ ಅವಧಿಯಲ್ಲಿ ಸರ್ಕಾರ ಹೊರಡಿಸಿದ ನೀತಿ-ನಿಯಮಗಳನ್ನು ಹಾಗೂ ಮಾರ್ಗ ಸೂಚನೆಗಳನ್ನು ಚರ್ಮಗಾರಿಕೆಯಲ್ಲಿ ತೊಡಗಿರುವ ನಮ್ಮ ಲಿಡ್ಕರ್ ಕುಟಿರ ಬಾಂಧವರು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದ್ದು ಅದರಂತೆ ನಮ್ಮ ಲಿಡ್ಕರ್ ಸಂಘದ ವತಿಯಿಂದ ಸಮಾಜ ಕಲ್ಯಾಣ ಇಲಾಖೆಗೆ 5ನೇ ಪತ್ರ ಬರೆದರೂ ಕೂಡ ಯಾವುದೇ ಪ್ರಯೋಜನ ಆಗಿರುವುದಿಲ್ಲ. ಜೊತೆಗೆ ಲಿಡ್ಕರ್ ಫಲಾನುಭವಿಗಳು ಸಾಕಷ್ಟು ಆರ್ಥಿಕ ನಷ್ಟ ಉಂಟು ಮಾಡಿಕೊಂಡಿರುತ್ತಾರೆ. ಇಂತಹ ಸಮಯದಲ್ಲಿ ಸಮಾಜ ಕಲ್ಯಾಣ ಇಲಾಖೆಯವರು ಜೀವನ ನಿರ್ವಹಣೆ ಮಾಡಲು ಆಹಾರಧಾನ್ಯದ ಕಿಟ್ಟು ಗಳನ್ನು ಪೂರೈಸಿ ಕರ್ನಾಟಕ ಸರ್ಕಾರದ ವತಿಯಿಂದ ಈ ಹಿಂದೆ ಘೋಷಣೆ ಆಗಿರುವ ಸಹಾಯಧನ ರೂಪಾಯಿ 5000 ಗಳನ್ನು ಈಗಲಾದರೂ ಫಲಾನುಭವಿಗಳ ಅಕೌಂಟಿಗೆ ಶೀಘ್ರವಾಗಿ ಮಂಜೂರು ಮಾಡಬೇಕೆಂದು ಕೇಳಿಕೊಳ್ಳುತ್ತೇವೆ. ಅದರಂತೆ ಪುನಃ ಎರಡನೇ ಅಲೆ ಕೋವಿಡ್ 19 ಪ್ರಾರಂಭವಾಗಿದ್ದು ಈ ಹಿಂದಿನಂತೆಯೇ ಸರ್ಕಾರದ ಆದೇಶದಂತೆ ಚರ್ಮಗಾರಿಕೆಯಲ್ಲಿ ತೊಡಗಿರುವ ಲಿಡ್ಕರ್ ಫಲಾನುಭವಿಗಳು ವ್ಯವಹಾರ ತಟಸ್ಥಗೊಳಿಸಿ ತುಂಬಾ ತೊಂದರೆಯಲ್ಲಿದ್ದಾರೆ. ಅದರಂತೆ ಸರ್ಕಾರದ ಮಾರ್ಗಸೂಚನೆಗಳನ್ನು ಪಾಲಿಸುತ್ತ ಇದ್ದು ಸರ್ಕಾರವು ಆಯಾ ಜಿಲ್ಲಾಧಿಕಾರಿಗಳಿಗೆ ಕೂಡಲೇ ಮಾರ್ಗಸೂಚಿಗಳನ್ನು ಹೊರಡಿಸಿ ಈಗಲಾದರೂ ಕರ್ನಾಟಕದ ಸಮಸ್ತ ಚರ್ಮಗಾರಿಕೆಯಲ್ಲಿ ತೊಡಗಿರುವ ಕುಟುಂಬಗಳಿಗೆ ಈ ಸಮಸ್ಯೆಗಳಿಂದ ಮುಕ್ತಗೊಳಿಸಿ ಕೂಡಲೇ ಪರಿಹಾರ ಮಾಡಬೇಕೆಂದು ಆಗ್ರಹಿಸಿದರು.
ಸಂಘದ ಮಂಜುನಾಥ. ಲ .ದೊಡವಾಡ, ಅಶೋಕ ಬಂಡಾರಿ, ಪರಶುರಾಮ ವಕ್ಕುಂದ, ಸಿದ್ದಪ್ಪ ಕಲಘಟಗಿ, ಪೆಶುರಾಮ ಬೇಣಗಿ, ಲಕ್ಷ್ಮಣ ದೊಡ್ಡವಾಡ, ಮಂಜುಳಾ ಭಂಡಾರಿ, ಪುಂಡಲೀಕ ಸವದತ್ತಿ, ಫಕ್ಕಿರಪ್ಪ ವಕ್ಕುಂದ, ಅಕ್ಕಮ್ಮ ದೊಡವಾಡ ಇದ್ದರು.