ಪರಿಸ್ಥಿತಿ ಹೇಗಿದ್ದರೂ ಮನಸ್ಥಿತಿ ಗಟ್ಟಿಯಾಗಿರಬೇಕು:ಗುಂಡಣ್ಣ ಡಿಗ್ಗಿ

ಕಲಬುರಗಿ:ಮೇ.26:ದಾಂಪತ್ಯ ಜೀವನದಲ್ಲಿ ಪರಿಸ್ಥಿತಿ ಹೇಗೆ ಬಂದರು ದಂಪತಿಗಳ ಮನಸ್ಥಿತಿ ಗಟ್ಟಿ ಆಗಿರಬೇಕು ಅಂದಾಗ ಮಾತ್ರ ಸಂತೃಪ್ತಿ ಜೀವನ ನಮ್ಮದಾಗುತ್ತದೆ ಎಂದು ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹೇಳಿದರು.
ನಗರದ ಗಾಜಿಪುರ ಬಡಾವಣೆಯಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ “ಸುಖೀ ಜೀವನಕ್ಕೆ ದಾಂಪತ್ಯದ ಸೊಬಗು” ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ ಇಂದಿನ ಸಂದರ್ಭದಲ್ಲಿ ಮನುಷ್ಯರ ಮನೆಗಳು ದೊಡ್ಡದಾಗುತ್ತಿವೆ ಮನಸ್ಸುಗಳು ಚಿಕ್ಕದಾಗಿ ವಿಭಕ್ತ ಕುಟುಂಬಗಳು ಹೆಚ್ಚಾಗಿ ಅತೃಪ್ತಿಯ ಜೀವನ ನಡೆಸುತ್ತಿದ್ದಾರೆ. ಇಂದಿನ ದಿನಮಾನಗಳಲ್ಲಿ ಅವಿಭಕ್ತ ಕುಟುಂಬವೆಂದರೆ ಕೇವಲ ಗಂಡ, ಹೆಂಡತಿ ಮಾತ್ರ ಸಿಮಿತವಾಗಿದೆ ಎಂದು ಹೇಳುತ್ತಾ ಹಲವಾರು ಹಾಸ್ಯ ಚಟಾಕಿಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿದರು.
ಆಯೋಜಕರಾದ ರಘುನಂದನ ಕುಲಕರ್ಣಿ ಮಾತನಾಡುತ್ತಾ ಈ ಭಾಗದ ಹಲವಾರು ಪ್ರತಿಭೆಗಳನ್ನು ಹಾಗೂ ಕಲಾವಿದರನ್ನು, ಸಮಾಜ ಸೇವಕರರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಜನಪದ ಕಲಾವಿದ ರಾಜು ಹೆಬ್ಬಾಳ, ಶ್ರವಣಕುಮಾರ ಮಠ, ಮಲಕಾರಿ ಪೂಜಾರಿ, ಮಲ್ಲಿನಾಥ ಕುಮಸಿ,ಮಹೇಶ ತೆಲೆಕುಣಿ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗುಂಡಮ್ಮ ಕುಲಕರ್ಣಿ, ಕೃಷ್ಣ ಕುಲಕರ್ಣಿ, ರಮೇಶ ಪಾಟಿಲ, ಎಲ್‍ಐಸಿ ಶಾಖಾಧಿಕಾರಿ ಜಿ ಪ್ರಸಾದ ರಾವ್, ಸತೀಶ ದೇಶಮುಖ, ಪಿ ವಿ ಶಟಗಾರ, ವಿರುಪಾಕ್ಷಪ್ಪ ಚೆಟ್ಟಿ, ಮಧುಸೂದನ ಕುಲಕರ್ಣಿ, ವಿನಾಯಕ ಕುಲಕರ್ಣಿ, ಪ್ರಕಾಶರಾವ ಕುಲಕರ್ಣಿ, ಬಾಪುಗೌಡ ಮಾಲಿ ಪಾಟೀಲ, ಸಂಗಮೇಶ ಪಾಟೀಲ, ರವಿ ಕುಲಕರ್ಣಿ, ರಮೇಶ ಬಾಳಿ, ರಾಹುಲ ಕುಲಕರ್ಣಿ, ರಮೇಶ ಬಾಳಿ, ವರಲಕ್ಷ್ಮಿ ಕುಲಕರ್ಣಿ, ಅಮರ ಸಾಲಿ, ಶಿವರುದ್ರ ಕಣ್ಣಿ, ಪ್ರಕಾಶ ದಂಡೋತಿ ಸೇರಿದಂತೆ ಅನೇಕ ಜನ ಭಾಗವಹಿಸಿದರು.