ಪರಿಸ್ಥಿತಿ ನಿಭಾಯಿಸಲು ಸೇನೆ ಸನ್ನದ್ದ: ನರವಣೆ


ನವದೆಹಲಿ, ಜ.೧೨-ನಾವು ದೇಶದ ಉತ್ತರದ ಗಡಿಗಳಲ್ಲಿ ಹೆಚ್ಚು ಎಚ್ಚರಿಕೆ ಕಾಪಾಡಿ ಕೊಂಡಿದ್ದೇವೆ. ಗಡಿಯಲ್ಲಿನ ಕೆಲ ವಿಷಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಇಷ್ಟಪಡುತ್ತಿದ್ದೇವೆ ಆದರೂ ಯಾವುದೇ ಸಂಭವನೀಯತೆ ಎದುರಿಸಲು ಸಿದ್ದರಾಗಿದ್ದೇವೆ ಎಲ್ಲಾ ವಿಧದ ಸಾಗಣೆ ಕುರಿತಂತೆ ಹೆಚು ನಿಗಾ ಹೊಂದಲಾಗಿದೆ ಎಂದು ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಹೇಳಿದರು.
ಭವಿಷ್ಯದ ಸವಾಲುಗಳನ್ನು ಎದುರಿಸಲು ಸೇನಯನ್ನು ತಂತ್ರಜ್ಞಾನ ಮೂಲಕ ಹೆಚ್ಚು ಶಕ್ತಿಯುತಗೊಳಿಸಲಾಗಿದೆ. ಸೈನ್ಯದ ಶಕ್ತಿಯನ್ನು ಹೆಚ್ಚು ಸಶಕ್ತಿಗೊಳಿಸಲು ಎಲ್ಲಾ ಹೊಸ ತಂತ್ರಜ್ಞಾನಗಳನ್ನು ಅಳವಡಿಸಲು ವಿಶಾಲವಾದ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಹೇಳಿದರು.
ನಾವು ಉತ್ತರದ ಗಡಿಗಳಲ್ಲಿ ಹೆಚ್ಚಿನ ಜಾಗರೂಕತೆ ಕಾಪಾಡಿಕೊಂಡಿದ್ದೇವೆ. ನಾವು ಶಾಂತಿಯುತ ಪರಿಹಾರಕ್ಕಾಗಿ ಆಶಿಸುತ್ತಿದ್ದೇವೆ. ಆದರೆ ಯಾವುದೇ ಸಂಭವನೀಯತೆ ಪೂರೈಸಲು ಸಿದ್ಧರಿದ್ದೇವೆ. ಎಲ್ಲಾ ವಿಧದ ಸಾಗಣೆಯತ್ತ ಗನಹರಿಸಿದ್ದೇವೆ ಎಂದರು.
ಕಳೆದ ವರ್ಷ ನಮಗೆ ಸಾಕಷ್ಟು ಸವಾಲುಗಳಿಂದ ಕೂಡಿತ್ತು. ನಾವು ಮಾತುಕತೆ ನಡೆಸಿ ಸವಾಲುಗಳನ್ನು ಎದುರಿಸಬೇಕಾಯಿತು. ನಾವು ಹಾಗೆ ಮಾಡಿದ್ದರಿಂದ ಸವಾಲುಗಳಿಂದ ಮೇಲಕ್ಕೆ ಬಂದೆವು. ಮುಖ್ಯ ಸವಾಲು ಕೋವಿಡ್-೧೯ ಮತ್ತು ಉತ್ತರದ ಗಡಿಗಳಲ್ಲಿನ ಪರಿಸ್ಥಿತಿ ಎಂದು ಸೇನಾ ಮುಖ್ಯಸ್ಥರು ಹೇಳಿದರು.