ಪರಿಸ್ಥಿತಿಯನ್ನು ನಿರ್ವಹಿಸುವ ಪರಿ ಬಿಜೆಪಿಗೆ ವರದಾನ : ಜಗದೀಶ್ ಶೆಟ್ಟರ್


ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ16: ಕಳೆದೆರಡು ಅವಧಿಯಿಂದ ನರೇಂದ್ರ ಮೋದಿ ದೇಶವನ್ನು ನಿರ್ವಹಿಸಿದ ಪರಿ, ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಇಂದು ಬಿಜೆಪಿ ಮೇಲೆ ಭರವಸೆಯನ್ನು ಮುಡಿಸಿದ್ದು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವರದಾನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಹೊಸಪೇಟೆಯಲ್ಲಿ ಹಮ್ಮಿಕೊಂಡ ವಿಜಯಸಂಕಲ್ಪ ಯಾತ್ರೆ ಪ್ರಯುಕ್ತ ಕಾರ್ಯಕ್ರಮದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಜಮ್ಮು ಕಾಶ್ಮೀರದಲ್ಲಿ 370 ಪರಿಚ್ಛೇದದ ಹಿಂಪಡೆತ, ಏಕರೂಪ ನಾಗರಿಕ ಕಾಯಿದೆ ಅನುಷ್ಠಾನ, ಕರೋನಾ ಸಂದರ್ಭದಲ್ಲಿ ನಿರ್ವಹಿಸಿದ ಪರಿ,  ದೇಶವಾಸಿಗಳಿಗೆ ಉಚಿತವಾಗಿ ನೀಡಿದ ಲಸಿಕೆ ವಿಶ್ವಮಾನ್ಯವಾಗಿದೆ ಇಂತಹ ಮಹತ್ವದ ಕಾರ್ಯಗಳು ಪಕ್ಷಕ್ಕೆ ಬಲವಾಗಿದೆ ಎಂದರು.
ಎಲ್ಲಾ ಕಾರ್ಯಕರ್ತರು ಒಮ್ಮತದಿಂದ ಚುನಾವಣೆ ಎದುರಿಸುತ್ತೇವೆ ಎಂದರು. ಸಿದ್ಧರಾಮಯ್ಯ ಸೇರಿದಂತೆ ವಿರೋಧಿ ಪಕ್ಷಗಳಿಗೆ ಯಾವುದೆ ವಿಷಯಗಳಿಲ್ಲದ ಕಾರಣ ವೃತಾ ಆರೋಪದಲ್ಲಿ ತೊಡಗುತ್ತಿದ್ದಾರೆ ಮುಖ್ಯಮಂತ್ರಿ ಆಗುವ ತಿರುಕನ ಕನಸುಕಾಣುತ್ತಿದ್ದಾರೆ ಎಂದರು.
ಯಾರೇ ಚುನಾವಣಾ ಆಕಾಂಕ್ಷಿಗಳಾಗಿದ್ದರು ಪಕ್ಷದ ನಿಲುವಿಗೆ ಬದ್ಧ ಎಂದರು.
ಸುದ್ಧಿಗೋಷ್ಠಿಯಲ್ಲಿ ಸಿದ್ದೇಶ ಯಾದವ್, ಸಿದ್ದರಾಜು,  ವೆಂಕಟೇಶ ಮಾಲಪಾಡಿ, ಸತ್ಯನಾರಾಯಣ, ಜಿ. ಭರಮನಗೌಡ ಸೇರಿದಂತೆ ಇತರರು ಹಾಜರಿದ್ದರು.

One attachment • Scanned by Gmail