ಪರಿಸರ ಸÀ್ವಚ್ಛವಾಗಿರಿಸುವುದು ನಾಗರಿಕ ಸಮಾಜದ ಕರ್ತವ್ಯ: ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ:ಆ.6: ಆರೋಗ್ಯವೇ ಭಾಗ್ಯ ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛ ಸುಂದರವಾಗಿರಿಸುವುದು ಪ್ರತಿಯೋಬ್ಬ ನಾಗರೀಕರ ಜವಾಬ್ದಾರಿ, ಕೇವಲ ಸರಕಾರಗಳಿಂದ,ಪುರಸಭೆ, ನಗರಸಭೆಗಳಿಂದ,ಪೌರ ಕಾರ್ಮಿಕರಿಂದ ಸ್ವಚ್ಛತೆ ನಿರೀಕ್ಷೆ ಮಾಡುವುದಕ್ಕಿಂತ ಸ್ವಯಂ ಪ್ರೇರಣೆ,ನೈತಿಕ ವ್ಯವಸ್ಥೆ ಕೂಡಾ ಅವಶ್ಯಕವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸ್ವಚ್ಛ ಇಂಡಿ ಅಭಿಯಾನದ ಕಾರ್ಯಕ್ರಮ ಉದ್ಘಾಟಿ ಮಾತನಾಡಿದ ಅವರು ನಿಸರ್ಗ ಮನುಷ್ಯನಿಗೆ ಸಾಕಷ್ಟು ಕೊಡುಗೆ ನೀಡಿದೆ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಪುರಸಭೆ ಡಸ್ಟಬಿನ್ ಇಟ್ಟಿರುತ್ತಾರೆ ಸಾರ್ವಜನಿಕರು ತಮ್ಮ ತ್ರ್ಯಾಜ್ಯ ವಸ್ತುಗಳನ್ನು ಡಸ್ಟಬಿನ್‍ದಲ್ಲಿ ಸಂಗ್ರಹಿಸಿದರೆ ಅದನ್ನು ಬೇರೆಕಡೆ ವಿಲೇವಾರಿ ಮಾಡುತ್ತಾರೆ ಇದರಿಂದ ನಗರದ ಸ್ವಚ್ಛತೆ ಆಗುತ್ತದೆ. ಪಟ್ಟಣದಲ್ಲಿ ರಸ್ತೆಗಳು ಇಕ್ಕಟ್ಟಾಗಿದ್ದಾಗ ವ್ಯಾಪಾರಸ್ಥರ ,ಬುದ್ದಿಜೀವಿಗಳ ಸಹಕಾರದಿಂದ ರಸ್ತೆಗಳ ಅಗಲೀಕರಣ ಮಾಡಿಸಿದ್ದೇನೆ. ಉತ್ತರ ಕರ್ನಾಟಕಕ್ಕಿಂತ ಸ್ವಚ್ಛತೆ ದಕ್ಷೀಣ ಕರ್ನಾಟದಲ್ಲಿ ಬಹಳ ಮಹತ್ವ ನೀಡಿದ್ದಾರೆ ಇದಕ್ಕೇಲ್ಲ ಆ ಭಾಗದ ಜನತೆಯ ಜಾಗೃತಿ ಪರಿಸರದ ಬಗ್ಗೆ ಕಾಳಜಿ , ನಮ್ಮ ಮನೆ ಸ್ವಚ್ಚತೆ ಇಡುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೂಡಾ ಸ್ವಚ್ಛತೆ ಕಾಪಾಡಬೇಕು. ವಿದೇಶಗಳಲ್ಲಿ ರಸ್ತೆ ಮೇಲೆ ಹಾಗೂ ರಸ್ತೆಗಳ ಬದಿಗೆ ಒಂದೇ ಒಂದು ಕಡ್ಡಿ ಬೀಳುವುದಿಲ್ಲ ಅಲ್ಲಿ ಸಾರ್ವಜನಿಕರೆ ಸ್ವಯಂಪ್ರೇರಣೆಯಿಂದ ಸ್ವಚ್ಛತೆ ಕಾಪಾಡುತ್ತಾರೆ. ಪೌರ ಕಾರ್ಮಿಕರು ದೇವರ ಸಮಾನ ಇಡೀ ಅವರ ಆರೋಗ್ಯದ ಕಡೆ ಗಮನ ನೀಡದೆ ಸಾರ್ವಜನಿಕರ ಹಿತ ಮುಖ್ಯ ಎಂದು ಸದಾ ಸ್ವಚ್ಛತೆಯ ಕಡೆ ಗಮನ ಹರಿಸುತ್ತಾರೆ.ನಿಜವಾಗಿ ಪೌರ ಕಾರ್ಮಿಕರಿಗೆ ಗೌರವ ಸಲ್ಲಬೇಕು ಎಂದರು.
ಉಪವಿಭಾಗಾಧಿಕಾರಿ ಹಮೀದ್ ಗದ್ಯಾಳ ಮಾತನಾಡಿ ಮಹಾತ್ಮಾ ಗಾಂಧಿಜೀಯವರು ಸ್ವಚ್ಛತೆಯ ಬಗ್ಗೆ ಸಾಕಷ್ಟು ಕಳಕಳಿ ಇತ್ತು , ಬಡವರ ರೋಗಿಗಳ ಸೇವೆಯೇ ದೇವರ ಸೇವೆ ಎಂಬ ನಂಬಿಕೆ ಅವರಲ್ಲಿತ್ತು.ಇಂಡಿ ಪಟ್ಟಣ ಸುಂದರವಾಗಿಸಲು ಸಮುದಾಯದ ಸಹಭಾಗಿತ್ವ ಮುಖ್ಯ ಎಲ್ಲರೂ ಸ್ವಯಂಪ್ರೇರಣೆಯಿಂದ ಕೆಲಸ ಮಾಡಬೇಕು. ಇಂಡಿ ರಸ್ತೆಗಳು ಸ್ವಚ್ಚತೆಯಿಂದ ಮರೀಚಿಕೆಯಾಗಿದೆ ಕಾರಣ ಸಾರ್ವಜನಿಕರು ,ವ್ಯಾಪಾರಸ್ಥರು ತ್ಯಾಜ್ಯ ವಸ್ತುಗಳ ರಸ್ತೆಯ ಮೇಲೆ ಬಿಸಾಕಿ ರಸ್ತೆಗಳ ಸೌಂದರ್ಯ ಹಾಳಾಗಿವೆ. ರಸ್ತೆಯ ಬದಿಗೆ ಮಣ್ಣು,ಮುರುಮು ಒಗೇದು ಮತ್ತಷ್ಟು ಕಲುಷಿತವಾಗಿದೆ ತಮ್ಮ ಅಂಗಡಿಗಳ ಮುಂದೆ ತಾವೇ ಸ್ವಚ್ಛಗೋಳಿಸಬೇಕು. 10 ದಿನಗಳವರೆಗೆ ನಡೇಯುವ ಸ್ವಚ್ಛತೆಯ ಅಭಿಮಾನದಲ್ಲಿ ಸಾರ್ವಜನಿಕರು ಸ್ವಯಂಪ್ರೇರಣೆಯೀಂದ ಪಾಲ್ಗೊಂಡು ನಗರ ಸುಂದರಗೋಳಿಸಬೇಕು ಎಂದು ಮನವಿ ಮಾಡಿದರು.
ಪುರಸಭೆ ಸದಸ್ಯರಾದ ಅನೀಲಗೌಡ ಬಿರಾದಾರ,ಭೀಮಾಶಂಕರ ಮೂರಮನ್, ಅಯುಬ ಬಾಗವಾನ, ಲಿಂಬಾಜೀ ರಾಠೋಡ, ಶಂಕರ ಖೋಡೆ, ಉಮೇಶ ದೇಗಿನಾಳ, ಸತೀಶ ಕುಂಬಾರ, ಮಹ್ಮದ ಸೌದಾಗರ,ಮುಸ್ತಾಕ ಇಂಡಿಕರ್, ಅಸ್ಲಂ ಕಡಣಿ, ಶ್ರೀಶೈಲ ಪೂಜಾರಿ, ಸುಧೀರ ಕರಕಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೂಮಿನ್, ಹುಚ್ಚಪ್ಪ ತಳವಾರ, ಧನರಾಜ ಮುಜಗೊಂಡ,ಪುರಸಭೆ ಅಧಿಕಾರಿ ಕೆ, ಲಕ್ಷ್ಮೀಶ, ಇಂಜಿನಿಯರ್ ಅಶೋಕ ಚಂದನ್, ವಿಜಯಕುಮಾರ ರಾಠೋಡ ಪುರಸಭೆ ಸಿಬ್ಬಂದಿಗಳಾದ ಅಸ್ಲಂ ಖಾದೀಂ, ಹುಚ್ಚಪ್ಪ ಶಿವಶರಣ,ಸೋಮು ನಾಯಕ, ಚಂದು ಕಾಲೇಭಾಗ, ಬೀದಿ ವ್ಯಾಪಾರಸ್ಥರ ಅಧ್ಯಕ್ಷ ರಂಜಾನ ಮಕಾನದಾರ, ಸೇರಿದಂತೆ ಪುರಸಭೆ ಸದಸ್ಯರು ಹಾಗೂ ವಿವಿಧ ಶಾಲೆ ,ಕಾಲೇಜುಗಳ ವಿಧ್ಯಾರ್ಥಿಗಳು,ನಗರದ ಮುಖಂಡರು ಉಪಸ್ಥಿತರಿದ್ದರುಅರಣ್ಯ ಇಲಾಖೆಯ ಧನರಾಜ ಮುಜಗೊಂಡ ಕಾರ್ಯಕ್ರಮ ನಿರೂಪಿಸಿದರು.