ಪರಿಸರ ಸ್ವಚ್ಚತೆಗೆ ಆದ್ಯತೆ ನೀಡಿಃ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ

ವಿಜಯಪುರ, ನ.3-ಜನರು ನಿಸರ್ಗವನ್ನು ಕಾಪಾಡಿಕೊಳ್ಳಬೇಕು ಅಂದಾಗ ಮಾತ್ರ ಸ್ವಚ್ಛವಾದ ಗಾಳಿ ಸೇವಿಸಿ ಆರೋಗ್ಯದಿಂದ ಇರಲು ಸಾಧ್ಯ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚತೆಯಿಂದ ನೋಡಿಕೊಳ್ಳಬೇಕ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಕರೆ ನೀಡಿದರು.
ನಗರದ ಐತಿಹಾಸಿಕ ಗೊಲಗುಂಬಜ ಆವರಣದಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ, ನೆಹರು ಯುವ ಕೇಂದ್ರ ವಿಜಯಪುರ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಮಂತ್ರಾಲಯ ನಗರಸಭೆ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಆಯೋಜಿಸಿದ ಅಂಗವಾಗಿ ಸ್ವಚ್ಚ ಭಾರತ ಅಭಿಯಾನದ ಮುಕ್ತಾಯ ಸಮಾರಂಭದಲ್ಲಿ ಮಾತನಾಡುತ್ತ ಶುದ್ಧ ಗಾಳಿ ಹಾಗೂ ಉತ್ತಮ ವಾತಾವರಣವನ್ನು ಸೃಷ್ಟಿಸಿ ಮಾಲಿನ್ಯ ತಡೆಗಟ್ಟಬೇಕು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಬಹಳ ಹಾನಿಯುಂಟಾಗಿದೆ. ಪ್ಲಾಸ್ಟಿಕ ಬಳಕೆ ಯಾರು ಮಾಡಬಾರದು. ನಗರದ ಅನೇಕ ಕಡೆ ಕಸದ ಕಪ್ಪು ಚುಕ್ಕೆಗಳು ಇದ್ದ ನಗರ ಪಾಲಿಕೆ ಹೆಚ್ಚಿನ ಆದ್ಯತೆ ನೀಡಿ ಅವುಗಳ ತ್ವರಿತ ವಿಲೇವಾರಿ ಮಾಡುತ್ತದೆ. ನಮ್ಮ ವಿಜಯಪುರ ನಗರ ಸ್ವಚ್ಚ ನಗರ ಎಂದು ಖ್ಯಾತಿಗಳಿಸಲು ಎಲ್ಲರ ಸಹಕಾರ ಅವಶ್ಯಕವಾಗಿದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ ಜಿಲ್ಲೆಯ ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಂಗಡನೆ ಮತ್ತು ಸಾಂಕ್ರಾಮಿಕ ರೋಗ ಹರಡದಂತೆ ಸ್ವಚ್ಚತೆಗೆ ಮೊದಲು ಆದ್ಯತೆ ನೀಡಲಾಗುವುದು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನು ನಿರ್ಮಾಣ ಮಾಡಿ ಈ ಬಗ್ಗೆ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಕೈಗೊಳ್ಳಲಾಗುವುದು ಎಂದರು.
ವೇದಿಕೆಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕøತರ ಫೆಡೆರೇಶನದ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವಿದ ಜಮಾದಾರ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಪ್ರಾಣೇಶ, ಜಾಗೀರದಾರ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಎನ್.ಎಸ್.ಎಸ್. ಅಧಿಕಾರಿ ಎಚ್.ಎಂ. ಸಜ್ಜಾದೆ, ರೋಟರಿ ಕ್ಲಭ ಪೀಟರ ಅಲೆಕ್ಝಾಂಡರ ಮಹಾನಗರಪಾಲಿಕೆ ಸಹಯಕ ಅಭಿಯಂತಕ ಎಸ್.ಎಸ್. ಸುರ್ಕಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಅಜಾರಿಕಾ ಅಮೃತ ಮಹೋತ್ಸವದ ಅಂಗವಾಗಿ ಅಕ್ಟೋಬರ 1 ರಿಂದ 31ರ ವರೆಗೆ ನಗರ ಮತ್ತು ಜಿಲ್ಲೆಯ ವಿವಿಧ ಭಾಗಗಳಲ್ಲಿ ಜಿಲ್ಲಾ ಪಂಚಾಯತ, ಮಹಾನಗರಪಾಲಿಕೆ, ಸ್ಕೌಟ್ಸ್ & ಗೈಡ್ಸ್ , ಎನ್.ಎಸ್.ಎಸ್. ¸ಂಘ ಸಂಸ್ಥೆಗಳು ಹಾಗೂ ವಿವಿಧ ಶಾಲಾ ಕಾಲೇಜುಗಳಲ್ಲಿ ಸ್ವಚ್ಚತಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಒಟ್ಟು 15 ಸಾವಿರ ಕೆ.ಜಿ. ಪ್ಲಾಸ್ಟಿಕ ಘನತ್ಯಾಜ್ಯಗಳನ್ನು ಸಂಗ್ರಹಿಸಿ ಮರು ಬಳಕೆಗಾಗಿ ವಿಜಯಪುರ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಯಿತು. ಅತೀ ಹೆಚ್ಚು ಪ್ಲಾಸ್ಟಿಕ ಘನತ್ಯಾಜ್ಯ ಸಂಗ್ರಹಿಸಿದ ವಿಜಯಪುರ ಮಹಾನಗರ ಪಾಲಿಕೆಗೆ ಸಿಬ್ಬಂದಿ ಆಜಾದ ಹಂಚನಾಳ ಪ್ರಥಮ ಬಹುಮಾನ ಹಾಗೂ 15 ಸಾವಿರ ನಗದು ಪ್ರಶಸ್ತಿ ಪತ್ರ ಎರಡನೆಯ ಬಹುಮಾನ ವಿಜಯಪುರ ಮಹಾನಗರಪಾಲಿಕೆ ಸಿಬ್ಬಂದಿ ಪರವಿನ ಇವರಿಗೆ 10 ಸಾವಿರ ನಗದು ಪ್ರಶಸ್ತಿ ಪತ್ರ ಮೊರನೆಯ ಬಹುಮಾನ ವಿಜಯಪುರ ಸ್ಕೌಟ್ಸ್ & ಗೈಡ್ಸ್ ಇವರಿಗೆ 5 ಸಾವಿರ ನಗದು ಪ್ರಶಸ್ತಿ ಪುತ್ರ ನೀಡಿ ಗೌರವಿಸಲಾಯಿತು. ಪ್ಲಾಸ್ಟಿಕ ಮುಕ್ತ ಆವರಣಕ್ಕಾಗಿ 67 ಶಾಲಾ ಕಾಲೇಜುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ಜಿಲ್ಲಾ ಯುವ ಅಧಿಕಾರಿ ರಾಹುಲ ಡೊಂಗ್ರೆ ಸ್ವಾಗತಿಸಿದರು. ಕೊನೆಯ ಸಹಾಯಕ ನಿರ್ದೇಶಕ ಎಸ್.ಜಿ. ಲೋಣಿ ವಂದಿಸಿದರು.