“ಪರಿಸರ ಸ್ನೇಹಿ ಸುಸ್ಥಿರ ಛಾವಣಿಯ ಲೀವಿಂಗ್ ರೂಫ್ಸ್”ಗೆ ಭಾರತೀಯ ಪೇಟೆಂಟ್ ಭಾಜನ

ವಿಜಯಪುರ: ಜ.1:ಜಿಲ್ಲೆಯ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಗ್ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಅನುರಾಧ ಎಸ್. ಟಂಕಸಾಲಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಮನ್ಸುರ ಅಲಿ ದುಂಡಸಿಯು ಅಭಿವೃದ್ಧಿ ಪಡಿಸಿದ “ಇಂಡಿಯನ್ ಪೇಟೆಂಟ್ ನಂ 489085” ತಂತ್ರಜ್ಞಾನವು ಪರಿಸರ ಸ್ನೇಹಿ, ಸುಸ್ಥಿರವಾದ ಲೀವಿಂಗ್ ರೂಫ್ಸ್ ಎಂಬುದು ಹಸಿರು ಛಾವಣಿಯ ಪರಿಕಲ್ಪನೆಯೊಂದಿಗೆ ಪೂರಕವಾಗಿದೆ. ಇದು ಕಟ್ಟಡದ ಕೋಣೆಯ ಉಷ್ಣಾಂಶವನ್ನು ಕಡಿಮೆ ಮಾಡುತ್ತದಲ್ಲದೆ ಮತ್ತು ಕಟ್ಟಡಗಳ ಸೌಂದರ್ಯದ ಸೌಬಗನ್ನು ಹೆಚ್ಚಿಸುತ್ತದೆ.
ಈ ಪೆಟೆಂಟ್‍ಗೆ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿತಾಂತ್ರಿಕ ಕಾಲೇಜಿನ ಮೊದಲ ಸಾಂಸ್ಥಿಕ ಪೇಟೆಂಟ್ ಆಗಿದ್ದು ಮತ್ತು ಸಿವಿಲ್ ವಿಭಾಗದಿಂದ ಪಡೆದ ಮೊದಲ ಪೇಟೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತೀಯ ಪೆಟೆಂಟ್ ಪಡೆಯುವಲ್ಲಿ ಯಶಸ್ವಿಯಾದ ಡಾ. ಅನುರಾಧ ಎಸ್. ಟಂಕಸಾಲಿ ಮತ್ತು ವಿದ್ಯಾರ್ಥಿ ಮನ್ಸುರ ಅಲಿ ದುಂಡಸಿ ಅವರ ಪರಿಶ್ರಮ ಮತ್ತು ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತ ಮಂಡಳಿ, ಕಾಲೇಜಿನ ಪ್ರಾಚಾರ್ಯ .ವಿ.ಜಿ.ಸಂಗಮ, ವಿಭಾಗದ ಮುಖ್ಯಸ್ಥರು ಹಾಗೂ ಶಿಕ್ಷಕ ವರ್ಗದವರು ಶುಭ ಹಾರೈಸಿದ್ದಾರೆ.