ಪರಿಸರ ಸ್ನೇಹಿ ಜೀವನ ಮಾಡಿ ಓಝೋನ್ ಪದರ ರಕ್ಷಿಸಬೇಕು 

ಚಿತ್ರದುರ್ಗ. ಸೆ.೧೭; ಮನುಷ್ಯರು ಪರಿಸರವನ್ನ ಯಥೇಚ್ಚವಾಗಿ ದುರ್ಬಳಕೆ ಮಾಡಿಕೊಂಡಿದ್ದರಿಂದ ವಿಶ್ವಾದ್ಯಂತ ಓಝೋನ್ ಪದರವು ತೆಳುವಾಗುತ್ತಾ ಬರುತ್ತಿದೆ, ಅದರ ಮೂಲಕ ಬರುವ ವಿಕಿರಣಗಳು ಮಾನವ ಸಂಕುಲವನ್ನು ನಾಶ ಮಾಡುವ ಸಂಭವವಿದೆ, ಜೀವಸಂಕುಲವನ್ನು, ಜೀವವೈವಿಧ್ಯತೆಯನ್ನು ಸಂರಕ್ಷಿಸಿ ಇಟ್ಟುಕೊಳ್ಳಲು ಪರಿಸರ ನಿರ್ಮಿಸಿಕೊಂಡಿದ್ದ ಹೊರಕವಚವನ್ನ, ನಾವು ಗೊತ್ತಿದ್ದೂ ಸಹ ನಾಶ ಮಾಡುತ್ತಿರುವುದು ದುರ್ದೆÊವದ ಸಂಗತಿಯಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ವಿಷಾದಿಸಿದರು. ಅವರು ಚಿತ್ರದುರ್ಗ ನಗರದ ಚಿನ್ಮೂಲಾದ್ರಿ ರಾಷ್ಟಿçÃಯ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವ ಓಝೋನ್ ದಿನಾಚರಣೆ ಪ್ರಯುಕ್ತ ಮಾತನಾಡುತ್ತಿದ್ದರು. ಮುಂದುವರಿದ ರಾಷ್ಟçಗಳಂತೂ ಯಥೇಚ್ಚವಾಗಿ ರಾಸಾಯನಿಕಗಳನ್ನು ಬಳಕೆ ಮಾಡಿ, ಓಜೋನ್ ಪದರವನ್ನು ರಂಧ್ರ ಮಾಡುವುದರ ಮುಖಾಂತರ ಮನುಕುಲಕ್ಕೆ ಗಂಡಾAತರವನ್ನು ತಂದೊಡ್ಡಿವೆ, ವಿಶ್ವದಲ್ಲಿರುವ ಯಾವ ಮುಂದುವರಿದ ರಾಷ್ಟçಗಳೂ ಸಹ, ತಮ್ಮಲ್ಲಿರುವ ರಾಸಾಯನಿಕಗಳ ಸಂಖ್ಯೆಯನ್ನು ಕಡಿಮೆ ಬಳಕೆ ಮಾಡುವುದರ ಬಗ್ಗೆ ಮುಂದಾಳತ್ವ ವಹಿಸುತ್ತಿಲ್ಲ. ಮುಂದುವರಿಯುತ್ತಿರುವ ರಾಷ್ಟçಗಳು ಸಹ ಓಝೋನ್ ಪದರದ ಬಗ್ಗೆ ಗಮನಹರಿಸುತ್ತಿಲ್ಲ ಎಂದರು.