ಪರಿಸರ ಸ್ನೇಹಿ ಗೋಮಯ ಹಣತೆಗಳ ತಯಾರಿಕೆಯ ಒಂದು ದಿನದ ಕಾರ್ಯಗಾರ

ಕಲಬುರಗಿ:ನ.13:ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಪ್ರಿಯವಾಗಿ ಆಚರಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯ ಗರೂರ (ಬಿ)ಗ್ರಾಮದ ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆ(ರಿ) ಹಾಗೂ ಸ್ಫೂರ್ತಿ ಕ್ರೀಯೇಟಿವ್ ಮೈಂಡ್ಸ ವತಿಯಿಂದ ಸಿಲ್ವರ್ ಲೈನ್ ಕಂಪ್ಯೋಟರ ತರಬೇತಿ ಕೇಂದ್ರ ಕಲಬುರಗಿಯಲ್ಲಿ ಪರಿಸರ ಸ್ನೇಹಿ ಗೋಮಯ ಹಣತೆಗಳ ತಯಾರಿಕೆಯ ಕುರಿತು ಒಂದು ದಿನದ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.

ಕಾರ್ಯಗಾರದಲ್ಲಿ ಸಿಲ್ವರ್ ಲೈನ್ ಕಂಪ್ಯೋಟರ ತರಬೇತಿ ಕೆಂದ್ರದ ವಿಧ್ಯಾರ್ಥಿಗಳು ಹಾಗೂ ಪರಿಸರ ಪ್ರಿಯರು ಆಕಳ ಸೆಗಣಿಯನ್ನು ಹಾಗೂ ಗೋಮೋತ್ರವನ್ನು ಬಳಸಿಕೊಂಡು ಹಣತೆಗಳನ್ನು ಸಿದ್ದ ಮಾಡಿದ್ದಾರೆ. ಶಿಬಿರದ ಉದ್ದೇಶಿಸಿ ಮಾತನಾಡಿ ಗೋಮಯ ದಿಂದ ತಯಾರಿಸಿದ ದೀಪಗಳನ್ನು ಬೇಳಗಿಸಿದರೆ ಪರಿಸರ ರಕ್ಷಣೆಯಲ್ಲಿ ಕೈ ಜೋಡಿಸಿದಂತಾಗುತ್ತದೆ. ಈ ದೀಪಗಳ ತಯಾರಿಕೆಯಲ್ಲಿ ಯಾವುದೇ ತರಹದ ರಾಸಾಯನಿಕ ಬಳಸುವುದಿಲ್ಲ. ಹಸಿ ಹಾಗೂ ಒಣ ಗೋಮಯ ಹಾಗೂ ಗೋಮೂತ್ರವನ್ನು ವಿಶ್ರಣ ಮಾಡಿ ಕೈಯಿಂದ ಹಣತೆಗಳನ್ನು ಸಿದ್ದಪಡಿಸಬಹುದಾಗಿದೆ ಈ ಹಣತೆಗಳು ದೀಪದೊಂದಿಗೆ ಉರಿದು ವಾತಾವರಣ ಶುದ್ಧಗೊಳಿಸುತ್ತದೆ. ಹಾಗೂ ಮಣ್ಣಿನಲ್ಲಿ ಬೇಗನೆ ಬೇರೆತು ಗೊಬ್ಬರವಾಗುತ್ತದೆ ಪರಿಸರಕ್ಕು ಹಾಗೂ ಮಾನವನಿಗೂ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮಂದಹಾಸ ಸಂಸ್ಥೆಯ ಅಧ್ಯಕ್ಷ ಶಿವರಾಜಕುಮಾರ ಹಳ್ಳಿ ತಿಳಿಸುವುದರ ಜೊತೆಗೆ ಪರಿಸರ ಸ್ನೇಹಿ ಹಣತೆಗಳು ಮಾಡುವುದನ್ನು ಕಲಿಸಿಕೊಡಲಾಯಿತು.

ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳು ಹಾಗೂ ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಕಾರ್ಯದರ್ಶಿ ಸಂಗಮ್ಮ ಹಳ್ಳಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.