ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ:ಅರಿವು ಮೂಡಿಸುವ ಕಾರ್ಯಕ್ರಮ

ಕಲಬುರಗಿ,ಸೆ.16:ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಲಬುರಗಿ ಪ್ರಾದೇಶಿಕ ಕಚೇರಿಯಿಂದ ಜಿಲ್ಲಾ ವಿಜ್ಞಾನ ಕೇಂದ್ರ, ಹಿಂಗುಲಾಂಬಿಕಾ ಪ್ರೌಢಶಾಲೆ, ಎಸ್.ಜಿ.ಎನ್. ಇಂಡಿಪೆಂಡೆಂಟ್ ಪಿಯು ಸೈನ್ಸ್ ಕಾಲೇಜ್ ಹಾಗೂ ವೇದ ಪಬ್ಲಿಕ್ ಸ್ಕೂಲ್‍ಗಳಲ್ಲಿ ಇದೇ ಸೆಪ್ಟೆಂಬರ್ 15 ಹಾಗೂ 16 ರಂದು ವಿದ್ಯಾರ್ಥಿಗಳಿಗೆ/ ಸಾರ್ವಜನಕರಲ್ಲಿ “ವಿಶ್ವ ಓಝೋನ್ ದಿನ”, “ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ ಮತ್ತು ಮಣ್ಣಿನ ಗಣಪತಿ ವಿಗ್ರಹ ತಯಾರಿಕೆ ಕಾರ್ಯಾಗಾರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವಿಶ್ವ ಓಜೋನ ದಿನಾಚರಣೆ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಸಿ.ಎನ್.ಮಂಜಪ್ಪ ಅವರು ಮಾತನಾಡಿ, ಓಝೋನ್ ಪದರದ ಪ್ರಾಮುಖ್ಯತೆ, ಅದರಲ್ಲಿ ರಂದ್ರಗಳು ಉಂಟಾಗಲು ಕಾರಣಗಳು ಕುರಿತು ಮಾಹಿತಿ ನೀಡಿದಲ್ಲದೇ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಲಬುರಗಿ ಪ್ರಾದೇಶಿಕ ಕಚೇರಿಯ ಉಪ ಪರಿಸರ ಅಧಿಕಾರಿ ಆದಮಸಾಬ್ ಅವರು ಮಾತನಾಡಿ, ಪರಿಸರ ಸ್ನೇಹಿ ಗಣಪತಿ ಹಬ್ಬವನ್ನು ಆಚರಿಸಬೇಕು ಎಂದರು.
ಸಹಾಯಕ ಪರಿಸರ ಅಧಿಕಾರಿ ಕುಮಾರಿ ಸುಧಾರಾಣಿ ಮತ್ತು ರಾಯಚೂರ ಎನ್.ಜಿ.ಓ. ಪ್ರತಿಭಾ ಅವರು ಕಲಬುರಗಿ ವೇದ ಪಬ್ಲಿಕ್ ಸ್ಕೂಲ, ಶಾಲೆಯಲ್ಲಿ ಗಣಪತಿ ತಯಾರಿಕೆ ಕುರಿತು ಪ್ರಾತ್ಯಕ್ಷಿತೆ ನಡೆಸಿಕೊಟ್ಟರು. ಸದರಿ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಮಾರು 100 ಮಣ್ಣಿನ ಗಣಪತಿ ವಿಗ್ರಹಗಳನ್ನು ತಯಾರಿಸಿ ಜಾಗೃತಿ ಮೂಡಿಸಿದರು. ಅಚ್ಚುಕಟ್ಟಾಗಿ ಮಾಡಿದ ಗಣೇಶ ವಿಗ್ರಹ ಮಾಡಿದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ರೂಪದಲ್ಲಿ ಗೌರವಧನ ನೀಡಿ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು.