ಪರಿಸರ ಸ್ನೇಹಿ ಗಣೇಶನಿಗೆ ಪೂಜೆ

ಮಾಲೂರು.ಸೆ೧೯:ಗಣೇಶೋತ್ಸವ ಪ್ರಯುಕ್ತ ಪಟ್ಟಣದಲ್ಲಿ ಧರ್ಮ ರಾಯ ಸ್ವಾಮಿ ದೇವಾಲಯ ಸಮಿತಿ ವರಸಿದ್ಧಿ ವಿನಾಯಕ ಕನ್ನಡ ಅಭಿಮಾನಿ ಬಳಗ ಹಿಂದೂಸ್ತಾನ್ ಯುವ ವೃಂದ ಸೇರಿದಂತೆ ವಿವಿಧ ಕಡೆ ಪರಿಸರ ಸ್ನೇಹಿ ಗಣಪತಿ ಮೂರ್ತಿ ಗಳನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆಗಳನ್ನು ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವ ಮೂಲಕ ಗಣೇಶೋತ್ಸವವನ್ನು ಶ್ರದ್ದಾ ಭಕ್ತಿ ಯಿಂದ ಆಚರಣೆ ಮಾಡಲಾಗಿದೆ.


ತಾಲ್ಲೂಕಿನಲ್ಲಿ ಗಣೇಶೋತ್ಸವ ಹಬ್ಬವನ್ನು ನಾಗರಿಕರು ಮನೆಗಳಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸಿ ಹಬ್ಬ ಆಚರಣೆಯನ್ನು ಮಾಡಿದರೆ ಸಂಘ ಸಂಸ್ಥೆಗಳು ಪುರಸಭೆಯ ಅನುಮತಿ ಪಡೆದು ಸಾರ್ವಜನಿಕವಾಗಿ ವಿವಿಧ ರೀತಿಯ ದೃಶ್ಯಗಳನ್ನು ನಿರ್ಮಿಸಿ ಬಗೆ ಬಗೆಯ ಬೃಹದಾಕಾರ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಗಣೇಶೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ.


ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ದೇವಾಲಯ ಸಮಿತಿ ವತಿಯಿಂದ ಉತ್ತರ ಭಾರತದ ಶೈಲಿಯಲ್ಲಿ ಗೋಪುರಗಳ ನಿರ್ಮಿಸಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಕುಪ್ಪ ಶೆಟ್ಟಿ ಬಾವಿ ಬಳಿ ಇರುವ ಗಣಪತಿ ದೇವಾಲಯದ ಆವರಣದಲ್ಲಿ ಕೋಟಿ ಲಿಂಗ ಗಳ ಸುಂದರವಾದ ದೃಶ್ಯವಳಿ ಗಳನ್ನು ನಿರ್ಮಿಸಿ ಬೃಹದಾಕಾರದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.


ಪಟ್ಟಣದ ತಾಲೂಕು ಪಂಚಾಯಿತಿ ರಸ್ತೆಯಲ್ಲಿರುವ ಕಾರ್ಯನಿರತ ಪತ್ರಕರ್ತರ ಭವನದಲ್ಲಿಯೂ ಸಹ ಮಣ್ಣಿನಿಂದ ಮಾಡಿರುವ ಪರಿಸರ ಸ್ನೇಹಿತ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು.
ಪಟ್ಟಣದ ಪುರಸಭೆಯ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರದಲ್ಲಿ ಪುರಸಭೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು.
ಪಟ್ಟಣದ ಟ್ಯಾಂಕ್ ರಸ್ತೆಯಲ್ಲಿ ಹಿಂದೂಸ್ತಾನ್ ವೃಂದದವರು ಚಂದ್ರಯಾನ ಮೂರರ ದೃಶ್ಯ ನಿರ್ಮಿಸಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು
ಪಟ್ಟಣದ ಕುಂಭೇಶ್ವರ ಕಲ್ಯಾಣ ಮಂಟಪ ಗಾಂಧಿ ವೃತ ಬಾಬುರಾವ್ ರಸ್ತೆ ಮಾರುತಿ ಬಡಾವಣೆ ಗಾಂಧಿವೃತ್ತ ಸೇರಿದಂತೆ ವಿವಿಧ ಕಡೆ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತಿದೆ ಭಕ್ತಾದಿಗಳು ಆಗಮಿಸಿ ಗಣಪತಿ ಮೂರ್ತಿಗಳನ್ನು ವೀಕ್ಷಣೆ ಮಾಡಿ ತೀರ್ಥ ಪ್ರಸಾದ ಸ್ವೀಕರಿಸಿದರು.